ಹೋಟೆಲು
ಅವ್ನು ಬರಾಗ ತಂದಿದ್ದ ಒಂದು ಸೌಟು ಜಾರ
ನಮಗೆಲ್ಲ ಕುಡಿಸ್ದ ನಮ್ಮೂರದೆ ನೀರ
ಆಗವ್ನೆ ಈಗ ಬಲ್ ದೊಡ್ಡ ಸವ್ಕಾರ
ಅನ್ನೋರ ನೋಡ್ದ್ರೆ ನಂಗೆ ಬಲ್ ಬೇಸ್ರ
ಹೊಟ್ಟೆ ಹಸುವಾಗ್ತಲೂನೆ ಓಡ್ತಿ ನೀ ಅಲ್ಗೆ
ಪಗಡದಸ್ತಾಗಿ ತಿಂದು ಕಾಯ್ತಿ ನೀ ಬಿಲ್ಗೆ
ದುಡ್ಡಿಲ್ದೆ ಕಣ್ ಕಣ್ ಬಿಡ್ತಿ ಕೇಳ್ತಿ ನೀ ಉದ್ರಿ
ಕೊಡದಿದ್ರೆ ಕ್ಯಾತೆ ತೆಗಿಯೋದು ನೀ ಖಾತ್ರಿ !
ಜೇಬಿಂದ ಮೆತ್ತಗೆ ಇಳಸ್ತಿ ನೀ ಒಂದು ಜಿರ್ಲೆ
ತಟ್ಟೆ ತೋರ್ಸಿ ಮಾಡ್ತಿ ನೀ ತರ್ಲೆ
ಗಿಟ್ಟಿಸ್ತೀ ಅವನಿಂದೆ ಸಿಗರೇಟಿಗೆ ಕಾಸು
ಬಿಟ್ಟಿ ತಿನ್ದಿದ್ದಲ್ದೆ ಡಬ್ಬಲ್ಲು ಲಾಸು.
ಹೆಂಡ್ತಿ ಸಿಡುಕಿದರೆ ಓಡ್ತಿ ನೀ ಅಲ್ಗೆ
ಪ್ರೇಮಿ ಮುನಿಸ್ಕೊನ್ದ್ರು ಹೋಗ್ತಿ ನೀ ಅಲ್ಗೆ
ಜಾತಿ ಮತ ಬೇದಿಲ್ದಿದ್ ಅದೊಂದೇ ಜಾಗ
ಬೈತೀಯ ಅವಂಗೆ ನಿನ್ನ ನಾಲಗೆ ಸೀದ್ ಹೋಗ
ನಿಮ್ಮ ಎಂಜಲು ಎತ್ತಿ ಮಾಡ್ತಾನೆ ನಿಮ್ಮ ಜೀತ
ಅವನ ಋಣ ತಿಂದು ನೀ ಹೊಡಿಬೇಡ ಗೋತ !
ರಾಜರತ್ನಂ ಅವರ ರತ್ನನ ಪದಗಳ ರೀತಿಯಲ್ಲಿ ಓದಿ
pl read and send your comment
ReplyDeletegrh