Thursday, June 3, 2010

ಲಂಚಾವತಾರ .

ಲಂಚದ ಮಾತ ಕೇಳ್ದ್ರೆ ಮಂದಿ
ಕೂರ್ತಾರೆ  ಗಾಂಧೀಜಿ ಮೂರು ಕೋತಿ ರೀತಿ
ಲಂಚ ಕೇಳದ ಕೊಡದ ಮಂದಿ
ಕಡಿಮೆ ಅನ್ನೋದು ಲಂಚದ ಖ್ಯಾತಿ .

ಲಂಚ ತಗೊಳ್ಳೋದು ಬಹಳ ತೆಪ್ಪು
ಅಂತಾರೆ ಮಂದಿ ಬಹಳ ಗಟ್ಟಿಯಾಗಿ
ಲಂಚ ತಗೊಳ್ದೋನು ಬಹಳ ಬೆಪ್ಪು
ಅಂತಾರೆ ಅವ್ರು ಬಹಳ ಗುಟ್ಟಾಗಿ.

ದೇವನೊಬ್ಬ ನಾಮ ಹಲವು ಎಂಬಂತೆ
ಲಂಚಕ್ಕೂ ಐತಂತೆ  ಬಹಳ ಹೆಸರುಗಳಂತೆ
 ಕಾರಕೂನ ತಗೊಂಡ್ರೆ ಅದು  ಲಂಚವಂತೆ
ಆಫೀಸರ್ ಕೇಳಿದ್ರೆ ಅದು  ಮಾಮೂಲಂತೆ
ದೊಡ್ದೋರಿಗೆ ಕೊಡೋದು ಗುಂಡುಪಾರ್ಟಿ
ಪುಡಾರಿ ಕೇಳೋದು   ಪಾರ್ಟಿಫಂಡು.

ಸಿನೆಮಾ ತಾರೆ ಬಿಕಿನಿ   ತೊಟ್ಟಕೊಂಡು ತೋರಿಸ್ದ್ರೆ ಮೈನ
ಮಾರ್ಕೆಟ್ನಲ್ಲಿ ಏರುತ್ತೆ ಆಕಿ ಸ್ತಾನ ಮಾನ .
ಬಡವಿ   ಹರುಕುವುಟ್ಕೊಂಡು  ತೋರಿಸ್ದ್ರೆ ಮೈನ
ಸಿಗುತ್ತಾ ಅವಳಿಗೆ ಸಿನಿಮಾನಟಿ ಸ್ತಾನ ?
ಈ ಮಾತ್ನಲ್ಲಿ ಅಡಗೈತೆ  ಲಂಚದ ಗುಟ್ಟು.
ಪುಡಿಗಾಸಿಗೆ ಕೈವೊಡ್ಡಿ ಆಗಬೇಡ ನೀ ಎಡವಟ್ಟು.


 ಪ್ರೇಯಸಿಯ ರಮಿಸಲು ನೀ  ನೀಡುವ ಪಾರ್ಟಿಯ ಲಂಚ
ಹೆಂಡತಿಯ ಮುನಿಸನು ತಣಿಸಲು ನೀಡುವ ಸೀರೆಯ  ಲಂಚ
ಮಕ್ಕಳು ಹಟವನು ತಡೆಯಲು ಕೊಡುವ ಚಾಕಲೇಟು ಲಂಚ
ಲಂಚ ಎಲ್ಲಿಲ್ಲ ನೀ ಹೇಳು ಕೊಂಚ ;ಇದು ಲಂಚದ ಪರ್ಪಂಚ .

ದೇವರ ಹನ್ನೊಂದನೇ ಅವತಾರವೇ ಲಂಚಾವತಾರ
ಇದನ್ನ ತಿಳಿಯದಿದ್ದವ   ಆಗ್ತಾನೆ ಹಳ್ಳಿ ಗಮಾರ
ಲಂಚದ  ವಿಶ್ವರೂಪವ ತಿಳಿಯಲು ,ಬೆಪ್ಪೆ ನಿನಗಿಲ್ಲ ಶಕ್ತಿ
      ತಿಮ್ಮಪ್ಪನಿಗೆ ಕಾಣಿಕೆ ಹಾಕಿ ಬೇಡಿಕೋ ಅದ ತಿಳಿಯುವ ಯುಕ್ತಿ .

ಲಂಚ ಪಡಿಯೋ ಜಾಗಕ್ಕೆ ಪಡೆಯಲು ನೀ ಬಡ್ತಿ
ತಿರುಪತಿ ತಿಮ್ಮಪ್ಪನೀಗೆ  ಕಾಣಿಕೆ ನೀ ಹಾಕ್ತಿ
ತಿಮ್ಮಪ್ಪಗೆ  ಕಾಣಿಕೆ ಹಾಕೋದ್ ನೀ ಮರ್ತಿ
ಲಂಚವಿಲ್ಲದ ಜಾಗದಿಂದ ನೀ ಪಡಿಯೋಲ್ಲ ಮುಕ್ತಿ.

ಕಟ್ಟಿಕೊಂಡ ಮಡದಿಯೇ ಸಂಬಳವಯ್ಯ
ನಿನ್ನ ಮನದನ್ನೆ  ಪ್ರೇಯಸಿಯೇ ಲಂಚವಯ್ಯ
ಪ್ರೇಯಸಿಯ ನೋಡಿ ಮಡದಿ  ಮುನಿಸಿಕೊಳ್ಳಳು ಇಲ್ಲಿ
ಸಂಬಳ ಗಿಂಬಳಗಳೆರಡೂ  ಮಡದಿಯ ಕೈ ಸೇರಿದಲ್ಲಿ.









2 comments:

  1. Lanchavatara is written with little bit of humour mixed with sarcasm to bribery in society.Just read loudly and enjoy it if you can.

    ReplyDelete
  2. Excellent uncle! I liked the 4th stanza very much.
    -shanmugan

    ReplyDelete