ಚಿರ ಯೌವನೆ
ವಯಸ್ಸು ದಾಟಿದೆ ಮೂವತ್ತು
ಕೆಟ್ಟು ಕುಳಿತಿದೆ ಸಮಯದ ಮುಳ್ಳು .
ಕಿಲಾಡಿ ಕನ್ನಡಿ ಅವಳ ನೋಡಿ
ಹೇಳಲು ಕಲುತಿದೆ ಹಸೀ ಸುಳ್ಳು.
ಕೇಶ ರಾಶಿ ನಶಿಸಿದೆ ಈಗ
ಶೇಷ ಭಾಗ ಅಪ್ಪಿದೆ ಮುಪ್ಪು
ಆದರೂ ಡೈ' ಪ್ರಭಾವ ,
ಉಳಿಸಿಕೊಂಡಿದೆ ಇನ್ನೂ ಬಣ್ಣ ಕಪ್ಪು.
ಉಳಿಸಿಕೊಂಡಿದೆ ಇನ್ನೂ ಬಣ್ಣ ಕಪ್ಪು.
ಆಗಾಗ ಮಿಟುಕುತ ಗಂಡನ ಕೇಳುವಳಾಕೆ
'ನಾ ಈಗ ಹೇಗೆ ಕಾಣಿಸ್ತೀನಿ ಹೇಳಿ ?'
ಹಲವು ಕಾಲಗಳಿಂದ ಅಬ್ಯಾಸವಾಗಿದೆ
ಅವನಿಗೆ ಸುಳ್ಳು ಹೇಳಿ ಹೇಳಿ .
ಆದಿನ ಪತಿರಾಯ ಮನೆಗೆ ಬಂದಾಗ
ನೋಡಿದ ಹೆಂಡತಿ ಕಣ್ಣಲ್ಲಿ ನೀರು
ಗಾಭರಿಯಲ್ಲಿ ಕೇಳಿದ ಅವನು
ನೀ ಯಾಕೆ ಅಳ್ತಿದ್ದೀ 'ಮೈಡಿಯರು'.
ಕಣ್ಣೀರ ಸುರಿಸುತ ಹೇಳಿದಳವಳು
ನನಗೆ ನಲವತ್ತಾದರೂ ಕಾಣಿಸ್ತೀನಂತೆ
ಚಿಕ್ಕ ಹುಡಿಗಿಯಂತೆ .
ಚಿಕ್ಕ ಹುಡಿಗಿಯಂತೆ .
ಅಯ್ಯೋ!ನಿಮ್ಮೆಜಮಾನ್ರುನ್ನ
ನೋಡಿದ್ರೆ ಅನ್ಸುತ್ತೆ
ಪಾಪ !ನಾಳೆಗೆ ರಿಟೈರಾಗೊರಂತೆ .
ನೋಡಿದ್ರೆ ಅನ್ಸುತ್ತೆ
ಪಾಪ !ನಾಳೆಗೆ ರಿಟೈರಾಗೊರಂತೆ .
ಅಂತಾಳ್ರೀ ನೆರಮನಿಯಾಕಿ
ಅವಳ್ಗೆಷ್ಟು ಸೊಕ್ಕು
ಅವಳ್ಗೆಷ್ಟು ಸೊಕ್ಕು
ವಿಷಯ ತಿಳಿದು ಆದ
ಪತಿರಾಯ ಬಹಳ ಪೆಚ್ಚು .
ಪತಿರಾಯ ಬಹಳ ಪೆಚ್ಚು .
ಅವನು ಮೆಲ್ಲಗೆ ಆಡಿಸಿದ
ಕೈಯ ತನ್ನ ತಲೆಮೇಲೆ
ಕೈಯ ತನ್ನ ತಲೆಮೇಲೆ
ಆಗನ್ನಿಸಿತವನಿಗೆ ಅದು
ಹೊರಗೂ ಆಗಿದೆ ಕಾಲಿ!
ಹೊರಗೂ ಆಗಿದೆ ಕಾಲಿ!
good one !
ReplyDelete- shanmugan