ಹಗರಣ
ನಮ್ಮ ದೇಶಕ್ಕೆ ಹಿಡಿದಿದೆ
ಹಗರಣಗಳ ಗ್ರಹಣ
ಹಗರಣಗಳಿಲ್ಲದ ದಿನವೊದಿಂದ್ದರೆ
ನೀ ಹೇಳು ಜಾಣ
ಹಗರಣಗಳ ಸೃಷ್ಟಿಸಲು ನಮಗೆ
ಬೇಕಿಲ್ಲ ಕಾರಣ
ಹಳೆ ಹಗರಣವ ಮುಚ್ಚಲು
ಬೇಕೊಂದು ಹೊಸ ಹಗರಣ
ಭೋಫೋರ್ಸ್ ಹಗರಣ ಮುಚ್ಚಿತು
ಹರ್ಷದ್ ಸ್ಟಾಕ್ ಮಾರ್ಕೆಟ್ ಹಗರಣ
ಸ್ಟಾಕ್ ಮಾರ್ಕೆಟ್ ಹಗರಣವ ಮರೆಯಲು
ಬಳಸಿದರು ಶೂಟ್ ಕೇಸ್ ಹಗರಣದ ಬಾಣ
ಶೂಟ್ ಕೇಸ್ ಹಗರಣವ ಮರೆಯಿಸಿತು
ಮಂದಿರ ಮಸೀದಿ ಹಗರಣ
ಮಂದಿರ ಮಸೀದಿ ಹಗರಣವ
ಕೆಡವಲು ಬಳಸಿದರು ಮಂಡಲದ ರಾಜಕಾರಣ.
ಟೆಲಿ ಫೋನ್ ಹಗರಣದ ಪಿತಾಮಹ
ಸುಖರಾಮನ ಹಗರಣ ಬರೇ ನಾಲ್ಕು ಕೋಟಿ
ಟೆಲಿ ಫೋನ್ ರಾಜನ ೨ ಜಿ ಹಗರಣ
ಲಕ್ಷ ಎಪ್ಪತ್ತಾರು ಸಾವಿರ ಕೋಟಿ
ಕಲ್ಮಾಡಿ ಮಾಡಿದ ಆಟದ ಹಗರಣ
ಎಪ್ಪತ್ತು ಸಾವಿರಕೋಟಿ
ಆದರು ಮರೆತಾರು ಕಲ್ಮಾಡಿಯನ್ನ
ರಾಜನ ಟೆಲಿ ಫೋನ್ ಹಗರಣದ
ಮುಂದೆ ಅವನೊಬ್ಬ ಬಚ್ಹ.
ಜಾತಿ,ಧರ್ಮ, ಭಾಷೆ ,ಲಂಚ
ಯಾವುದಾದರೊಂದು ಕಾರಣ
ಸಾಕು ನಮಗೆ ಹುಟ್ಟಿಸಲೊಂದು
ಬಹು ದೊಡ್ಡ ಹಗರಣ
ಇದಕ್ಕೆಲ್ಲ ಮೂಲಕಾರಣ
ಓಟಿನ ರಾಜಕಾರಣ
ಹಗರಣವ ಆಳವ ತಿಳಿಯೋ ನೀ ಜಾಣ
ಓಟು ಹಾಕುವ ಮುನ್ನ !
ಇಲ್ದ್ದಿದ್ರೆ ನೀ ಆಗ್ತಿ
ಬಲುದೊಡ್ಡ ಕೋಣ !!
No comments:
Post a Comment