Tuesday, December 21, 2010

scams-hagarana

ಇಂಗ್ಲೀಷನಲ್ಲಿ' ಸ್ಕಾಂ' ಅಂದರೆ ಕನ್ನಡದಲ್ಲಿ ಹಗರಣ ಎಂಬ ಅರ್ಥ ಕೊಡುತ್ತಂತೆ.ಹತ್ತಾರು ಜನರು ಒಟ್ಟು ಸೇರಿ [ರಾಜಕಾರಣಿ ಗಳಿರಬಹುದು,ಅಧಿಕಾರಿಗಲಿರಬಹುದು ಅಥವಾ ಉದ್ಯಮಿ ಆಗಿರಬಹುದು  ] ಸಾರ್ವಜನಿಕ ಸೊತ್ತನ್ನು ಲೂಟಿಮಾಡಿ ಸರಕಾರಕ್ಕೆ  ಅಥವಾ ಸಾರ್ವಜನಿಕರಿಗೆ  ಮೋಸ ಮಾಡುವ ಘನ ಕಾರ್ಯಕ್ಕೆ 'ಹಗರಣ' ಎಂಬ ಗೌರವಾನ್ವಿತ  ಹೆಸರನ್ನು ಕೊಡಲಾಗಿದೆ.ಹಗರಣಗಳು ನಂಮತಹ  ಜನರಿಗೆ ದಿನನಿತ್ಯ ಕುಳಿತು ಹರಟೆ ಹೊಡೆಯಲು ಒಂದು ವಿಷಯವಾದರೆ ,ಈ ಮಹಾನ್ ವ್ಯಕ್ತಿಗಳಿಗೆ ಇದೊಂದು ವ್ಯವಹಾರ ವಾಗಿದ್ದು ತಮ್ಮ ಹತ್ತು ಪೀಳಿಗೆಗೆ ಆಗುವಷ್ಟು ಹಣ ಮಾಡುವ ಒಂದು ಸದವಾಕಾಶ.
ಇತ್ತೀ ಚಿಗೆ  ಇದೊಂದು ಮಾಮೂಲಿ ವಿಷಯ ವಾಗಿದೆ.ಭೋಫೋರ್ಸ್ ನಿಂದ  ಸುರುವಾದ ಹಗರರಣಗಳ [ ಬರೇ ೬೪ ಕೋಟಿ] ಒಂದು ಅದ್ಯಾಯವು ದಿನದಿಂದ ದಿನಕ್ಕೆ ಬೆಳೆದು ಈಗ commonwealth ಹಗರಣ [ಕೇವಲ ೭೦೦೦೦ ಕೋಟಿ] 2G  ಹಗರಣದ [ಅಂದರೆ ೧,೭೬೦೦೦ ಕೋಟಿ] ಮಟ್ಟಕ್ಕೆ ತಲುಪಿದೆ ಅಂದರೆ ,ಇಂತಹ ಹಗರಣದ ಪಿತಾಮಹಾರಾದ ರಾಜೀವ್ ಗಾಂಧಿ ಮತ್ತು ನರಸಿಂಹ ರಾಯರು  ಸ್ವರ್ಗದಲ್ಲಿ ಕುಳಿತು ನಗುತ್ತಿರಬೇಕು .ಹರ್ಷದ್ ಮೆಹತ  ತಾನೆಸ್ಟು ಮೂರ್ಖ ಎಂದು ಹೇಳಿಕೊಳ್ಳುತ್ತಿರಬಹುದು.ನಮ್ಮ ದೇಶದಲ್ಲಿ ಹಗರಣಕ್ಕು ಹಾಗೂ ಟೆಲಿಕಾಂ ಗೂ ಏನೋ ಒಂದು ಸಮ್ಹಂದ ಇದೆ .ಮಾನ್ಯ ಸುಕರಾಮ್ ಅವರಿಂದ ಸುರುವಾದ ಈ ಹಗರಣ [ಕೇವಲ ನಾಲ್ಕು ಕೋಟಿ] ಇಂದು ೧೭೬೦೦೦ ಕೋಟಿ ತಲುಪಿ ಮೊಬೈಲ್ ತೆಲೆಪೋನ್ ಹೆಮ್ಮರವಾಗಿ ಬೆಳೆದಿದೆ .ನಮ್ಮನ್ನು ಆಳುವ ಪ್ರಭುಗಳ ಈ ಘನ ಕಾರ್ಯ ದಿಂದ ನಮ್ಮದೇಶವು ಲಂಚದ ರೇಟಿಂಗ್ ನಲ್ಲಿ  ಪ್ರಪಂಚದಲ್ಲೇ ೧೮೪ ಸ್ಥಾನ ತಲುಪಿದೆ ಎಂದರೆ ನಾವು ಹೆಮ್ಮೆ ಪಡಬೇಕು.ಸದ್ಯದಲ್ಲೇ ನಾವು ಅತ್ಯಂತ ಭ್ರಷ್ಟ ರಾಷ್ಟ್ರ ಅನ್ನಿಸಿಕೊಂಡರೆ ಆಶ್ಚರ್ಯವಿಲ್ಲ .
ನಾವು ಇಂತಹ ಘನ ಕಾರ್ಯದಲ್ಲಿ ಮುಂದು ವರಿಯುತ್ತಿರುವಾಗ ನಾವು ಮುಂದುವರಿದ ರಾಷ್ಟ್ರ ಎಂಬುದರ ಬಗ್ಗೆ ಯಾರು ಅನುಮಾನ ಪಡಬಾರದು.
ನಮ್ಮದೇಶದ ದೇಶಪ್ರೇಮಿ ಪಕ್ಷಕ್ಕೆ ಸೇರಿದವರು ಸಹಾ  ಹಗರಣದ ವಿಷಯದಲ್ಲಿ ತಾವೇನು ಕಡಿಮೆ ಇಲ್ಲ ಎಂದು ತೋರಿಸಿಕೊಂಡಿದ್ದಾರೆ. ಕರ್ನಾಟಕ ದೇಶದ ಮೊಟ್ಟಮೊದಲ ದೇಶಪ್ರೇಮಿ ಸರಕಾರ ಮಾಡುತ್ತಿರುವ ಹಗರಣಗಳು ಒಂದೇ, ಎರಡೇ  ? ಇವರು  ಹಿಂದೆ ನಮ್ಮನ್ನಾಳಿದ ಪಕ್ಷ ೬೦ ವರ್ಷದಲ್ಲಿ ಮಾಡ ಲಾಗದಿದ್ದನ್ನು  ಇವರು ಕೇವಲ ಎರಡೇ  ವರ್ಷದಲ್ಲಿ  ಮಾಡಿ ತೋರಿಸಿದ್ದಾರೆ.ಕರ್ನಾಟಕ ರಾಜ್ಯದ ಗಣಿ,ಭೂಮಿ ಎಲ್ಲವನ್ನು ತಮ್ಮ ಕುಟುಂಬಕ್ಕೆ    ಧಾರೆ ಎರದು ಕೊಟ್ಟು ,ಆಳುವವರು ಹೇಗೆಲ್ಲ ನುಂಗ  ಬಹುದು ಎಂದು ಬೇರೆಯವರಿಗೆ ತೋರಿಸಿಕೊಟ್ಟಿದ್ದಾರೆ. ಬೇರೆ ಪಕ್ಷ ದವರು ಕೈ ಕೈ ಹಿಸುಕಿಕ್ಕೊಂದು ಹಣೆಗೆ ಬಡಿದು ಕೊಳ್ಳುತಿದ್ದಾರೆ.ಇವರು ಇನ್ನೂ ಹತ್ತು ವರ್ಷ ಆಳಿ ಕರ್ನಾಟಕವನ್ನು ಉದ್ದಾರ ಮಾಡುತ್ತೇವೆಂದು ಹೇಳುವದನ್ನು ನೋಡಿದರೆ ಕರ್ನಾಟಕದ ಭವಿಶ್ಯ  ಬಗ್ಗೆ ನಾವು ಚಿಂತೆ ಪಡಬೇಕು.ಇನ್ನು ಹತ್ತು ವರ್ಷದಲ್ಲಿ ಋಷ್ಯಮೂಕ ಪರ್ವತ ನೆಲಸಮ ವಾಗುತ್ತೆ .ಪಶ್ಚಿಮ ಘಟ್ಟ ನಿರ್ನಾಮ ವಾಗಬಹುದು  .ಮಲೆನಾಡು ನೆಲನಾಡು ಆಗಬಹುದು.
ಇವೆಲ್ಲದರ  ನಡುವೆ ಸಾಮಾನ್ಯ ಪ್ರಜೆ ತನಗೇನು ಸಂಭಂದ ವಿಲ್ಲದಂತೆ ತಮಾಷೆ ನೋಡುತ್ತಿದ್ದಾನೆ.ಪಾಪ! ವೋಟು ಕೊಟ್ಟವರೆಲ್ಲ ಹೀಗಾದರೆ ಅವನಾದರೂ ಏನು ಮಾಡಿಯಾನು ?
ಸತ್ಯ ವಂತರಿಗಿದು ಕಾಲವಲ್ಲ
ಅಸತ್ಯ ವಂತ ರಿಗಿದು ಸುಭಿಕ್ಷ ಕಾಲ  ಎಂದು ಹೇಳಿದ ಪುರಂದರ ದಾಸರ ನುಡಿ ಇಂದು  ನಾವು ನೆನಪಿಸ ಕೊಳ್ಳಬೇಕು.
ಜೈ ಹಗರಣ !
ಜೈ ರಾಜಕಾರಿಣಿ !

No comments:

Post a Comment