ಪದಗಳು ಬಣ್ಣಿಸುವುದಿಲ್ಲ ------
ಒಂದು ದಿನ ಕುಳಿತೆ ನಾನು
ಬರೆಯಲೊಂದು ಕವನ
ಪದಗಳ ಮೋಡಿಯಲ್ಲಿ
ಬಣ್ಣಿಸಲವಳ ವದನ
ಪದಗಳು ಬಳುಕುವುದಿಲ್ಲ
ಅವಳ ನಡುವು ಬಳುಕಿದಂತೆ
ಪದಗಳು ಹೇಳುವುದಿಲ್ಲ ಕಥೆ
ಅವಳ ಮುಗ್ಧ ನಯನದಂತೆ
ಪದಗಳು ನೀಡುವುದಿಲ್ಲ ಆಸರೆ
ಅವಳ ಹೃದಯ ನೀಡುವಂತೆ
ಪದಗಳು ನೀಡುವುದಿಲ್ಲ ಮುದ
ಅವಳ ವಕ್ಷಸ್ಥಳದಂತೆ
ಪದಗಳು ಮೀಟುವುದಿಲ್ಲ ಭಾವನೆಯ
ತಂತಿ ಅವಳು ಮೀಟುವಂತೆ
ಪದಗಳು ನೀಡುವುದಿಲ್ಲ ಪ್ರೇಮದ
ಸವಿ ಅವಳು ನೀಡುವಂತೆ
ಪದಗಳು ನೀಡುವುದಿಲ್ಲ ಚುಂಬನ
ಅವಳ ಕೆಂದುಟಿಯು ನೀಡುವಂತೆ
ಪದಗಳು ನಗುವುದಿಲ್ಲ ಹಾಲ್ನಗು
ಅವಳ ಮುಗ್ಧ ನಗುವಿನಂತೆ .
ಪದಗಳೀಗೆ ಜೀವವಿಲ್ಲ ಜೀವ
ನೀಡುವುದೊಂದು ಹೆಣ್ಣು
ಹೆಣ್ಣ ಬಣ್ಣಿಸುವ ಪದಗಳೆಲ್ಲ
ಕಂಡಿತೊಂದು ಪ್ರೇಮಿಯ ಒಳಗಣ್ಣು
good one! Have u got it reviewed from Aunty yet?
ReplyDeleteshanmugan