ವಿಮರ್ಶಕ
ವಿಮರ್ಶೆಯೊಂದು ದೊಡ್ಡ ಕಲೆ ,ಬೆಂಕಿಯ ಒಲೆ
ಲೇಖಕರ ಜಾಲಾಡಿಸುವ ಜರಡಿಯ ಬಲೆ
ಲೇಖಕರ ಜಾಲಾಡಿಸುವ ಜರಡಿಯ ಬಲೆ
ಆದೀತೊಮ್ಮೆ ಲೇಖನಿಯಿಂದ ಲೇಖಕನ ಕೊಲೆ
ಲೇಖಕನೊಬ್ಬ ಸಿಕ್ಕಿ ಪರದಾಡುವ ಜೇಡರ ಬಲೆ .
ರವಿಕಾಣದ್ದನ್ನ ಕವಿಯೊಬ್ಬ ಕಂಡನಂತೆ ,
ಕವಿ ಕಾಣದ್ದನ್ನ ವಿಮರ್ಶಕ ಕಂಡನಂತೆ
ಕಾವ್ಯದಲಿ ಇಲ್ಲವಾಗಿದೆ ಸೃಜನಶೀಲತೆ ,
ಕಾವ್ಯದಲಿ ಇಲ್ಲವಾಗಿದೆ ಸೃಜನಶೀಲತೆ ,
ಇಲ್ಲ ಭಾಷೆಯ ಮೇಲಿನ ಹಿಡಿತದ ಕೊರತೆ
ಕಾವ್ಯದಲ್ಲಿಲ್ಲ ಲಯ ಬದ್ಧತೆ ,ನವೀನತೆ
ಲೇಖಕ ತಾಳಲಾರ ಅವನ ದೃಷ್ಟಿಯ ತೀಷ್ಣತೆ
ಬರಹದಲ್ಲಿಲ್ಲ ಬಂಡಾಯತನ , ಸಾಮಾಜಿಕ ತುಡಿತ
ತುಂಬಿದೆ ಅತಿ ಲೈಂಗಿಕತೆ,ಇಲ್ಲವಾದರೆ ಮಡಿವಂತಿಕೆ.
ಹುಟ್ಟಿಸುವ ಲೇಖಕನಿಗೆ ನವವಧುವಿಗೆ ಅತ್ತೆಯ ಭೀತಿ
ನವ ಲೇಖಕನೊಬ್ಬ ಎದುರಿಸಲೇ ಬೇಕಾದ ಫಜೀತಿ .
ನವ ಲೇಖಕನೊಬ್ಬ ಎದುರಿಸಲೇ ಬೇಕಾದ ಫಜೀತಿ .
ಬುದ್ದಿಜೀವಿಯಾದಲ್ಲಿ ನೀವು ಪುರೋಗಾಮಿ ಸಾಹಿತಿ
ಹಿಂದುಳಿದವರಾದಲ್ಲಿ ನೀವು ಬಂಡಾಯ ಸಾಹಿತಿ
ನೀತಿಗೆ ಒತ್ತ ನೀಡಿದರೆ ನೀವಾಗುವಿರಿ ಮಡಿವಂತ ಸಾಹಿತಿ
ಬಲಪಂಥೀಯರಾದಲ್ಲಿ ನೀವು ಪ್ರತಿಗಾಮಿ ಸಾಹಿತಿ
ಈ ಪರೀಕ್ಷೆಯಲಿ ಗೆದ್ದು ಬಂದಲ್ಲಿ ಆಗುವ ಅವನು ಸಾಹಿತಿ
ಇಲ್ಲದಿದ್ದಲ್ಲಿ ಆಗುವನು ಬರಹಗಳೊಂದಿಗೆ ಬೆಂಕಿಗೆ ಆಹುತಿ
Lovely! It has captured all the aspects of a vimarshaka.
ReplyDelete