ಯಾರಿವನು
ಜಂಬೂ ದ್ವೀಪದಂತೆ ಅವನ ಮುಖ
ವಕ್ರತುಂಡನಂತ ಅವನ ದೇಹ
ನಗುವ ಹುಟ್ಟಿಸುವ ಅವನ ರೂಪ
ಭರತಖಂಡವ ನಡುಗಿಸಿದನಾ ಭೂಪ
ಸಿಂಹಾಸನವನೇರಿದ ಪ್ರಭುವಲ್ಲ ಅವನು
ಪಟ್ಟಭದ್ರ ರಾಜಕರಿಣಿಯಲ್ಲ ಅವನು
ಕೋವಿಹಿಡಿದ ಭಯೋತ್ಪಾದಕನಲ್ಲ ಅವನು
ಬ್ಯಾಲಿಟ್ಟಿನಿಂದ ಬುಲೆಟ್ಟಿನ ಭಯ ಹುಟ್ಟಿಸಿದವನು
ಏರಿದ ಚುನಾವಣಾ ಕಮಿಷನ್ ಕುರ್ಚಿ
ಅವನಿಗಿಲ್ಲ ಯಾವ ರಾಜಕಾರಿಣಿಯ ಮರ್ಜಿ
ಸಂವಿಧಾನದ ಅಂಕುಶ ಹಿಡಿದ ಮಾವುತನವನು
ರಾಜಕಾರಿಣಿಗಳ ನಡುಗಿಸಿದ ರಾವುತನವನು
ಚುನಾವಣೆಗೆ ತಂದನವ ಹೊಸ ಸೆನ್ಸೇಷನ್
ಚುನಾವಣೆಸಂಹಿತೆಗೆ ಮಾಡಿದರೆ ಒಯ್ಲೇಷನ್
ಆದನವ ರಾಜಕಾರಿಣಿಯ ಬೆಂಬಿಡದ ಅಲ್ಸೇಷನ್
ಅವನೇ ನಾವೀಗ ಮರೆತ ನಮ್ಮ ಶೇಷನ್ !
No comments:
Post a Comment