Wednesday, May 26, 2010

ಹೋಟೇಲ್  ನಗರ   

ಕರ್ನಾಟಕದ  ರಾಜಧಾನಿ ಈ  ಬೆಂಗಳೂರು ನಗರ
ಆಗಿತ್ತಂತೆ  ಹಿಂದೆ  ಸಸ್ಯಕಾಸಿ,  ಉದ್ಯಾನ ನಗರ
ಈಗಲ್ಲಿ   ಕಾಣದು ಉದ್ಯಾನಗಳು ,ಪಾರ್ಕುಗಳು
ತುಂಬಿರುವುದಲ್ಲಿ ,ಡಾನ್ಸಬಾರು ,ಹೋಟೆಲುಗಳು.

ಮುಂಜಾನೆ ಎದ್ದು  ಬೆಂಗಳೂರಿಗನಿಗೆ  ಬೇಕು
' ಕಾಮತ್''ರ  ಚಹಾದ ಸವಿ, 'ಹಳ್ಳಿ ಮನೆ'ಯ ತಿಂಡಿರುಚಿ
 ಉಪಾಹಾರಕ್ಕೆ  ಬೇಕು  ಜನತಾ ಹೋಟೆಲಿನ ಇಡ್ಲಿ ವಡೆ
 ಇಲ್ಲವಾದರೆ  ಉಪಾಹಾರ ದರ್ಶಿನಿಯ ಪೊಂಗಲ್ ವಡೆ  

ಲಾಲ್  ಬಾಗ್ಹ್  ಹೋದರೆ  'ಕ್ಯೂ' ನಲ್ಲಿ ನಿಂತು  ಮೆಲ್ಲುವನು
ಪೂರಿ ,ದಮ್ರೋಟು ಮಾವಳ್ಳಿ  ಟಿಫಿನ್ ರೂಮಿನಲಿ
ಗಾಂಧಿಬಜ್ಹಾರ್  ಶಾಪಿಂಗ್ ಲಿಸ್ಟಿನಲಿ ಸೇರೆಲೇಬೇಕು
ಡಬ್ಬಲ್  ಮಸಾಲೆ ದೋಸೆ ವಿಧ್ಯಾರ್ಥಿ  ಭವನದಲಿ  

ಜಿವ್ಹಾ  ಚಾಪಲ್ಯದಲಿ   ಮೀರಿಸುವರಿಲ್ಲ ಬೆಂಗಳೂರಿಗನು
ಅದಕ್ಕೆಂದೇ ಕಾಣುವಿರಿ  ಬೀದಿ ಬೀದಿಗೊಂದು 'ದರ್ಶಿನಿ'ಯನು
   ರಾತ್ರಿಯಲಿ  ಉದಯಿಸುವುವು  ಪುಟ್ಪಾಪಾತ್  'ಚಾಟು'ಗಳು
ಚುರುಕು ಗೊಳ್ಳುವವು  ರಸಿಕರಿಂದ ಎಲ್ಲ  ಡಾನ್ಸ್  ಬಾರುಗಳು'

ಅವನು ಮಯ್ಯರಲ್ಲಿ ದಕ್ಷಿಣದ ಮ್ಯಾಕ್ಸಿ ಉಂಡು ತೇಗುವ ಚಂದ
 ೧೯೪೭ ನಲ್ಲಿ ಉತ್ತರದ ತಿನಸುಗಳ  ಚಪ್ಪರಿಸುವ  ಅಂದ
ಆಗಾಗ  ಆಂಧ್ರ ,ಗುಜರಾತು ,ಪಂಜಾಬಿ,ಚೈನೀಸ್ ಶೈಲಿ ಊಟ     
ಇವೆಲ್ಲ ಬೋರಾದಲ್ಲಿ  ಮನೆಯಲ್ಲೇ ತಿನ್ನುವ  ರಾಗಿ ಮುದ್ದೆ ಊಟ.

ವಿವಧತೆಯಲ್ಲಿ ಏಕತೆಯ ಸಂಕೇತ ಬೆಂಗಳೂರಿಗನ  ನಾಲಗೆ
ಉತ್ತರ ,ದಕ್ಷಿಣ ,ಪೂರ್ವ ,ಪಶ್ಹಿಮವೆಂಬ  ಬೇಧವಿಲ್ಲ ಅದಕೆ.
ಹೋಟೆಲಿಗರು 'ಹೈಜಾಕ್ '  ಮಾಡಿರುವರು ಅವನ ನಾಲಗೆಯನ್ನ 
ಹಾಕಿರುವರು ಅವನ ಹೃದಯ, ಜೇಬುಗಳೆರಡಕ್ಕು  ಕನ್ನ!

ಅವನಾಡುವ ಭಾಷೆ ಕನ್ನಡ ,ತಮಿಳೋ ಏನಾದರೂ ಅಗಲಿ ಅಣ್ಣ
ಹೋಟೆಲಿನ ಶುಚಿ ರುಚಿ ತಿನಸುಗಳಿಗೆ ಭಾಷಾಭೇಧವಿಲ್ಲಣ್ಣ .
ಈಗ ಬರೇ  ಚಿನ್ನ, ರನ್ನಕ್ಕೆ ಮನದನ್ನೆ ಒಲಿಯುದಿಲ್ಲಣ್ಣ
ಈ ಮಾತು ಕರ್ಣಾನಂದ ,ಹೋಟೆಲಿನ ಮಂದ ಬೆಳಕಿನಡಿಯಣ್ಣ  

ಪ್ರೇಮಿಗಳ ಹೃದಯಗಳು ಬೆಸೆಯುವುದು ಈಗ ಪಾರ್ಕಲ್ಲಲ್ಲಣ್ಣ
" ಪಾರ್ಕಿನಲಿ ಬೆನ್ನ ಹತ್ತಿ  ಬರುವ ಪೋಲಿಸನ ನುಡಿಮುತ್ತಿಗಿಂತ
 ಆ ಹೋಟೇಲ್ ಮಾಣಿಯ ಮೆನುಲಿಸ್ಟ್  ಎಸ್ಟು  ಚೆನ್ನ" ,
ಎಂದು  ಹೇಳಿದಳು ನನ್ನ ಚಿನ್ನ ,ಅನುಮಾನ ನಿನಗ್ಯಾಕೆ?
ಅವಳೇ  ನನ್ನಾಕೆ ,  ಆಕೆ   "ಪ್ಯೂರ್ " ಬೆಂಗಲೂರಿಗಳಣ್ಣ!  



 

4 comments:

  1. Bangalore is famous for hotels.This made me to write this.pl comment

    ReplyDelete
  2. Wow!! uncle, I did not you have published books and now into bloging!! that great

    Giri

    ReplyDelete
  3. nice coverage of Bangalore hotels...Mouth watering :-) donne biryani, gaadi meenigoo bara illa!

    ReplyDelete
  4. ಈಗ ಬರೇ ಚಿನ್ನ, ರನ್ನಕ್ಕೆ ಮನದನ್ನೆ ಒಲಿಯುದಿಲ್ಲಣ್ಣ
    - Very true statement !
    As usual excellent.
    - shanmugan

    ReplyDelete