ನಾನು ಕಂಡೆ ದೇವರು ---
ಶಿಲ್ಪಿಯೊಬ್ಬ ಕಡೆದನೊಂದು ಕಲ್ಲಿನಲಿ ಮೂರುತಿ
ಪೂಜಾರಿಯೊಬ್ಬ ಗುಡಿಯಲಿಟ್ಟು ಎತ್ತಿದ ಮಂಗಳಾರತಿ
ಮಾಡಿದನವನು ನಾಮಕರಣ ಆ ಮೂರುತಿಗೆ
ಹೆಣೆದನೊಂದು ಕಥೆಯನವನು ಕ್ಷೇತ್ರ ಮಹಾತ್ಮೆಗೆ
ಹರಿದು ಬಂತು ಎಲ್ಲಕಡೆಯಿಂದ ಭಕ್ತರ ಹೊಳೆ,
ಸುರಿಯಿತು ಹಣ ,ಚಿನ್ನಾಭರಣದ ಸುರಿಮಳೆ
ಗರ್ಭಗುಡಿಯ ಸುತ್ತ ಬೆಳೆಯಿತು ದೊಡ್ಡ ಪೌಳಿ
ಭಕ್ತರ ದ್ರಷ್ಟಿಗೂ ನಿಲುಕದು ಈಗ ಗರ್ಭಗುಡಿ
ಮೂರುತಿಗೆ ತೊಡಿಸಿದರು ಮೈತುಂಬ ಚಿನ್ನಾಭರಣ
ಅಲಂಕರಿಸಿದರು ಚಂದದ ಹೂವಿನ ಮಾಲೆಗಳಿಂದ
ಹಣತೆಯ ಮಂದ ದೀಪದಲ್ಲಿ, ಕತ್ತಲ ಗರ್ಭಗುಡಿಯಲ್ಲಿ
ಕಾಣದು ಮೂರುತಿಯ ರೂಪ,ನೋಡಲು ಬಿಡ ಪೂಜಾರಿ ಭೂಪ .
ಭಕ್ತನೊಬ್ಬ ಬಂದು ಕತ್ತು ಉದ್ದ ಮಾಡಿ ನಿಂತ
ನುಗ್ಗಿದಾ ಇಣುಕಿದಾ ಆದರೂ ಕಾಣದು ಮೂರುತಿ
ಹೊರಟನವ ಬೇಸರದಿಂದ ದೇಗುಲದ ಹೊರಗೆ
ಕಣ್ಮುಚ್ಚಿ ಕೈಮುಗಿದು ನಿಂತ ಗರ್ಭಗುಡಿಗೆ.
ಘಂಟೆಯ ಶಬ್ದ ,ಜಾಗಟೆಯ ಧ್ವನಿ
ಭಕ್ತರ ಗಲಾಟೆ ,ಯಾವುದಕ್ಕೂ ತೆರೆನವ ಕಣ್ಣು
ತೃಪ್ತಿ ಮಂದಹಾಸ ಕಾಣಿಸಿತು ಅವನಮುಖದಲ್ಲಿ
ಸಂತಸದಲಿ ಕೂಗಿದನವ ನಾ ದೇವರ ಕಂಡೆನೆಂದು.
ಒಡಿದನವನು ದೇವರ ನೋಡಿದ ಉನ್ಮತ್ತೆತೆಯಲಿ ,
ಭಕ್ತರೆಲ್ಲ ನೋಡಿದರು ಅವನನ್ನು ಬಹಳ ಕೌತುಕದಲಿ
ಅವನು ಓಡುತ್ತಲೇ ಇದ್ದ ನಿಲ್ಲದೆ ಮುಂದೆ
ನಾ ಓಡಿದೆ ಬೆಂಬಿಡದೆ ಅವನ ಹಿಂದೆ.
ಏದುಸಿರು ಬಿಟ್ಟು ನಿಂತು ನೋಡಿದ ನನ್ನ
ಕೇಳಿದ ' ಯಾಕೆ ಬಂದೆ ನನ್ನ ಹಿಂದೆ?'
'ನೀನು ದೇವರ ನೋಡಿದೆಯ ?'ಕೇಳಿದೆ ನಾನು
ನೀನೊಬ್ಬ ಹುಚ್ಹ, ಎಂದು ಹೇಳಿ ನಕ್ಕ ಅವನು.
ಕಣ್ಮುಚ್ಚಿ ನೋಡು ಕಾಣಿಸ್ತಾನೆ ದೇವರು.
ಕಣ್ತೆರೆದಾಗ ಕಾಣುವುದು ಪೂಜಾರಿ
ಮಂದ ದೀಪ,ಚಿನ್ನಾಭರಣ ಕಾಣಿಕೆ ಡಬ್ಬ
ಕಾಣನು ದೇವರು!
It is simple poem about god.God is inside you ,only you need the vision to see him.
ReplyDeleteExcellent...There is a saying uncle.. We surf the internet for everything (including god..)instead we should be surfing the innernet(within ourself)
ReplyDeleteShanmugan --