Tuesday, May 25, 2010

Middle Class

ಯಾರಿವರು ?

ಮೇಲ್ವರ್ಗಕೆ ಸೇರಿದವರೆನ್ನಲು
 ಹೇಳಲು ಅಳುಕಿ ,
ಕೆಲಸ್ತರದವರೊಂದಿಗೆ  ಸೇರಲು
ನಾಚಿ, ಹೇಸಿ ,
ತಮಗಾಗಿ ಒಂದು ತ್ರಿಶಂಕು
 ವರ್ಗವ ನಿರ್ಮಿಸಿ ,
ಬೀಗುವ ನವ ಭಾರತದ
ವಿಶ್ವಾಮಿತ್ರರಿವರು.

ಧರ್ಮ ,ಜಾತಿಗಳ ಚಕ್ರವ್ಯೂಹವ 
ಭೇಧಿಸಲಾರದವರು.
ಮೂಢನಂಬಿಕೆಯ ಸಂಕಲೆಯ
 ಬಿಡಿಸಿ ಕೊಳ್ಳಲಾರದವರು.
 ಸ್ವಲ್ಪ ಜ್ಞಾನವ ಗಳಿಸಿ
ಪಂಡಿತರ ಸೊಗಡಿನಲಿ ನಡೆಯುವವರು.

ದೇಶದ ಕ್ಲಿಸ್ಟ ಸಮಸ್ಯೆಗೆ
ತಟ್ಟನೆ ಪರಿಹಾರ  ನೀಡುವರಿವರು
ತಮ್ಮ ಭವಣೆಗೆ
ಪರಿಹಾರ ಕಾಣದವರು.
ವ್ಯಕ್ತಿ ಸ್ವಾತಂತ್ರ,ಪ್ರಜಾತಂತ್ರದ 
 ಹರಿಕಾರರಿವರು
ಆದರೂ ಒಮ್ಮೆ ಕ್ಯೂನಲ್ಲಿ ನಿಂತು
ಓಟು ಹಾಕದವರು.

  ಕಾರು, ಬಂಗಲೆಗಳ  ಭವ್ಯ ಜೀವನದ  
ಕನಸುಗಾರರಿವರು ,
ಕ್ರೆಡಿಟ್ ಕಾರ್ಡ್ ಜೀವನಕೆ
ಅಂಟಿಕೊಂಡವರು. 
ವ್ಯಾಪಾರಿಗಳ ಕಣ್ಮಣಿಗಳಿವರು 
ಸಾಲದ ಶೂಲದಿಂದ  ನರಳುವವರು.

ಅಷ್ಟೇನು ತತ್ವನಿಸ್ಟರೂ ಅಲ್ಲ,
ಶಿಷ್ಟಾಚಾರವನೂ   ಬಿಡಲೊಲ್ಲ ,
ಪುಡಾರಿಗೂ  ಇವರು  ಸಲ್ಲ ,
 ಮಧ್ಯಮ ವರ್ಗದವರು.











2 comments: