ಸಾರಿ ಪ್ಯಾರಿ
ಮನೆಗೆ ಬಂದಾಗ, ನೋಡಿ ಹೆಂಡ್ತಿ ಉರಿ ಮೋರಿ
ಮನೆಗೆ ಬಂದಾಗ, ನೋಡಿ ಹೆಂಡ್ತಿ ಉರಿ ಮೋರಿ
ಅವ್ನ ' ದಿಲ್ ' ಗಾಯ್ತು ಎಲ್ಲಿಲ್ಲದ ಗಾಭರಿ
ಹೆದರಿ ಮೆಲ್ಲಗೆ ಕಿವಿಯಲಿ ಉಸುರಿದ ಪ್ಯಾರಿ
ನೀ ಯಾಕೆ ಮುನಿದಿರುವೆ ನನ್ನ ಹೃದಯೇಶ್ವರಿ
ಸಾರಿ, ನನ್ನ ಚಿನ್ನ ನೀ ಮಾಡಬೇಡ ಕಿರಿ ಕಿರಿ .
ಕಿರಿ ಕಿರಿ ಅಂತಿರೇನು , ಅದೆಷ್ಟು ದೈರ್ಯ ನಿಮ್ಗೆರೀ ?
ನಿಮಗೆ ಕಟ್ಟಿದನಲ್ಲ ನಮಪ್ಪ ಅದು ನನ್ನ ಕರ್ಮರೀ
ಅಯ್ಯೋ ಆ ಪಕ್ಕದ ಮನಿಯಾಕಿ ಅದ್ರಷ್ಟ ನನಗಿಲ್ಲರೀ
ಅವ್ಳು ಯೆಜಮಾನ್ರು ನಿಮಗಿಂತ ಎಷ್ಟೋ ವಾಸಿರೀ
ಅವ್ರು ಮಾಡೋ ಕೆಲಸ ನಿಮ್ಮ ಕೈಲಾಗೋಲ್ಲರಿ !
ಇದ ಕೇಳಿ ಅವ್ನ ಎದೆಯಲ್ಲಿ ಹತ್ತಿತು ಬುಗ್ಗೆಂದು ಉರಿ
ಎದೆಯೇರಿಸಿ ದೈರ್ಯದಿ ನಡೆಸಿದ ಹೆಂಡ್ತಿ ಏನ್ ಕ್ವೈರಿ
ಕೋಪದಲಿ ಕಿರುಚಿದಳಾಕೆ ಬಾಯ್ ಮುಚ್ಚಿ ಸುಮ್ನಿರಿ
ಯಾರಿಗೆ ಬೇಕ್ರೀ ನಿಮ್ಮ ಒಣ ಮಾತು ಸಾರಿ ಪ್ಯಾರಿ
ತಾಕತ್ತಿದ್ದರೆ ತಂದು ಕೊಡ್ರೀ ಅವ್ರಂತೆ ತಿಂಗಳಿಗೊಂದು ಸಾರಿ !!
u can post your comments on this small humorous poem if can like it.
ReplyDeletenice one chikkappa...poetic explanation of the scene which is seen in many movies.
ReplyDelete