Sunday, August 8, 2010

ದೇರ್ ನಗರಿಯ ಅಂದ್ಹೇರ್ ರಾಜ

ಅದೊಂದು ದೇರ್  ನಗರಿ ಅದಕ್ಕೊಬ್ಬ ಅಂದ್ಹೇರ್ ರಾಜ
ಪ್ರಕಾಂಡ ಪಂಡಿತ, ಜ್ಞಾನವೃದ್ದ  ,ವಯೋವೃದ್ದ
ಆ ದೇಶದ ವ್ಯವಸ್ತೆ ಚಲಿಸುತ್ತಿತ್ತು ಆಮೆಯ ನಡಿಗೆಯಲಿ
ಪ್ರಜೆಗಳು ನಿದ್ದ್ರಿಸಿದ್ದರು ರಾಜನ ಭಾಷಣದ ಗುಂಗಿನಲಿ

ದೇರ್ ನಗರಿಯೊಲ್ಲೊಂದು ಕಾಣಿಸಿತು ಬೆಂಕಿಯ ಕಿಡಿ
ನೋಡಿ  ಪ್ರಜೆ ಹೆದರಿ  ಓಡಿದ ಕೊತ್ವಾಲನ ಬಳಿ
ಅಪ್ಪಣೆಕೊಡಿ ಸ್ವಾಮಿ ಬೆಂಕಿ ಆರಿಸಲು ಕೇಳಿದ ಪ್ರಜೆ
"ಸ್ವಲ್ಪತಡಿ" ಹೇಳಿದ ಕೊತ್ವಾಲ, ಹೋದ  ಗ್ರಾಮಾದಿಕಾರಿಯ ಬಳಿ
ಗ್ರಾಮಾದಿಕಾರಿ ವಿಷಯ  ತಿಳಿಸಿದ ಮುಖ್ಯಾಧಿಕಾರಿಗೆ,
ಮುಖ್ಯಾಧಿಕಾರಿ   ತಿಳಿಸಿದ ಬೆಂಕಿಯ ಕಾಟ  ಮಹಾಮಂತ್ರಿಗೆ .

ಮಹಾಮಂತ್ರಿ  ಹೋದ ರಾಜನ ಬಳಿ ಆಮೆಯ ನಡಿಗೆಯಲಿ
ರಾಜ ಗಾಢನಿದ್ರೆಯಲಿದ್ದ  ತನ್ನ ಪಾಂಡಿತ್ಯದ ಗುಂಗಿನಲಿ
 ರಾಜನ ಎಚ್ಚರಿಸಿ ಹೇಳಿದ  "ಪಟ್ಟಣಕ್ಕೆ ಬೆಂಕಿ ಹತ್ತಿದೆಯೆಂದು,"
ಪ್ರಭೋ  ಆರಿಸಲು ಕಾಯುತ್ತಿರುವೆ ತಮ್ಮ ಅಪ್ಪಣೆಗೆಂದು

"ದೇರ್ ನಗರಕ್ಕೆ ಹೇಗೆ ಹತ್ತಿತು ಬೆಂಕಿ ಕಾರಣವ ನೀಡಿ "ಎಂದ ರಾಜ
" ಕಾರಣವ ತಿಳಿಯದೆ ಅಪ್ಪಣೆಯ ನೀಡೆ ಬೆಂಕಿಯ ಆರಿಸಲೆಂದ  "ರಾಜ
 "ಹತ್ತಿದೆ ಬೆಂಕಿ ರಾಜಮಹಲಿಗೂ ಮಹಾಪ್ರಭೋ' ಅರುಹಿದ ಮಂತ್ರಿ
"ಅದು ಸುಡಲು  ತಮ್ಮ  ಅಪ್ಪಣೆಗಾಗಿ  ಕಾಯುತ್ತಿಲ್ಲ" ಎಂದ ನಮ್ರತೆಯಿಂದ 

 ನೀಡಿರುವೆ ಅಪ್ಪಣೆಯ ಬೆಂಕಿ ಆರಿಸಿ ಎಂದ  ರಾಜ ಗಾಭರಿಯಿಂದ  
ಕುಳಿತನವ ಬೆಂಕಿಯ ಹತ್ತಿದ  ಕಾರಣವ ತಿಳಿಯದೆ ಚಿಂತೆಯಿಂದ
ಅಷ್ಟರಲಿ ದಳ್ಳುರಿಯು ನಗರವ ನುಂಗಿ ಮಾರಣ ಹೋಮ ಮಾಡಿತ್ತು 
ಬೆಂದ ಕರಕಲು ಹೆಣದ ವಾಸನೆ ಬಾನಿನಲಿ ತುಂಬಿತ್ತು . 


   

No comments:

Post a Comment