Sunday, October 2, 2011

JNANAPEETA-KAMBARA-PAPU

ಜ್ನಾನಪೀ ಠ  ಪ್ರಶಸ್ತಿ -ಕಂಬಾರ - ಪಾಪು

ಕನ್ನಡಕ್ಕೆ ಮೊನ್ನೆ ಎಂಟನೆ  ಜ್ಞಾನಪೀ ಠ ಪಶಸ್ತಿ ಕಂಬಾರರಿಗೆ ಸಿಕ್ಕಾಗ ಕನ್ನಡಿಗರೆಲ್ಲರೂ ಖುಷಿ  ಪಟ್ಟರೂ   ಸಹಾ, ಪಾಪು ಅವರಿಗೆ ಖುಷಿ ಆಗಲಿಲ್ಲ .ಕಾರಣ ,ಬೈರಪ್ಪನವರಿಗಿಂಥ ಕಂಬಾರರು ಈ ಪ್ರಶಸ್ತಿಗೆ ಖಂಡಿತ ಅರ್ಹರಲ್ಲ ಎಂಬುದು ಅವರ ಅಭಿಮತ .ಕನ್ನಡಕ್ಕೆ ಮೊದಲು ಐದು ಪ್ರಶಸ್ತಿ ಗಳು ಬಂದಾಗ ಇಂಥಹ ಯಾವುದೇ ಅಪಸ್ವರ ಕೇಳಿರಲ್ಲಿಲ್ಲ.ಯಾಕೆಂದರೆ ಅವರ ಅರ್ಹತೆ ಪ್ರಶ್ನಾರ್ಹವಾಗಿರಲಿಲ್ಲ  .ಆದರೆ URA ಮತ್ತು ಕಾರ್ನಾಡರಿಗೆ ದೊರೆತಾಗ ಇಂಥಹ ಅಪಸ್ವರಗಳು ಕೇಳಿಬರಲು ಶುರುವಾಯಿತು.ಇದಕ್ಕಾಗಿ ಒಂದು ಎಡಪಂಥೀಯ ಲಾಬಿ ಕೆಲಸಮಾಡುತ್ತಿದೆ  ಎನ್ನಲಾಯಿತು.ಇದು ಎಷ್ಟರ ಮಟ್ಟಿಗೆ ಸರಿಯೋ ತಪ್ಪೋ ನಮಗೆ ತಿಳಿಯದು.ಆದರೆ ಕಾರ್ನಾಡರು ಯಾವಾಗಲೂ ನನಗಿಂತ ಮೊದಲು ಲಂಕೇಶರು ಮತ್ತು  ತೇಜಸ್ವಿಗೆ ಸಿಗಬೇಕಿತ್ತು ಅನ್ನುವಾಗ ಅವರೀಗೆ ತನಗೆ ದೊರಿತಿದ್ದ ಪ್ರಶಸ್ತಿ ಬಗ್ಗೆ ಅಳುಕಿದೆ  ಅನ್ನಿಸುತ್ತೆ .ಪ್ರಶಸ್ತಿ ಬರಲು ಅರ್ಹತೆ ಜೊತೆಗೆ ಲಕ್ಕೂಇರಬೇಕುಎಂದುಅವರುಹೇಳುವಾಗಇದುಮತ್ತೂ ,ನಿಜಅನ್ನಿಸಬಹುದು.ಕಂಬಾರರನ್ನೂ ,ಬೆಳವಾಡಿ ಪ್ರಶ್ನಿಸಿದಾಗ
ಉತ್ತರ ಕೊಡಲು ಹೆಣಗಾಡುತ್ತಿ ದ್ದಾಗ,URA ಉತ್ತರಿಸುತ್ತಿದ್ದರು . ಅವರಿಗೂ ಸಹಾ ಎಲ್ಲೊ ಅಳುಕಿದೆ ಎನ್ನಿಸುತ್ತೆ. 


ಒಬಾಮರಿಗೆ  ನೋಬೆಲ್ ದೊರೆತಾಗ ಅವರೂ ಸಹಾ ಹೀಗೆ  ಅಂದಿದ್ದರು. ಕಿಸಿನ್ಜರನೀಗೆ  ಯಾವ ಪುರುಷಾರ್ಥಕ್ಕಾಗಿ  ನೋಬೆಲ್ ದೊರೆಯಿತು ಎನ್ನುವುದು ಇಂದಿಗೂ ಪ್ರಶ್ನೆ ಆಗಿದೆ .ಆದರೆ ನೊಬೆಲ್ ಪ್ರಶಸ್ತಿಯ ಕಳೆ ಇಂದಿಗೂ ಕುಂದಿಲ್ಲ ಅನ್ನುವುದು   ಸತ್ಯ. ಎಲ್ಲಾ  ಪ್ರಶಸ್ತಿಗಳು ಸಾಮಾನ್ಯವಾಗಿ  ಪ್ರಸ್ನಾರ್ಹ ವಾಗಿ ಚರ್ಚೆಗೆ ಎಡೆ ಮಾಡಿ ಕೊಡುತ್ತವೆ.ಇದಕ್ಕೆ  ಕಾರಣ ಪ್ರಶಸ್ತಿ ನೀಡುವಾಗ ಒಂದಕ್ಕಿಂತ ಜಾಸ್ತಿ ಅರ್ಹ ಅಭ್ಯರ್ಥಿಗಳು ಇರುತ್ತಾರೆ .ಕನ್ನಡದಲ್ಲಿ,ರಾಷ್ಟ್ರಕವಿ ಶಿವರುದ್ರಪ್ಪ ಇದ್ದಾರೆ,ಬೈರಪ್ಪನವರಿದ್ದಾರೆ .ಹಾಗೂ ಇನ್ನು ಎಷ್ಟೋ ಮಂದಿ ಅರ್ಹರು ಇರಬಹುದು .ಆದರೆ ಪ್ರಶಸ್ತಿ ದೊರೆತಾಗ ಮಾತ್ರ ,ಅವರ  ಕೃತಿ ಅಥವಾ ಕೊಡುಗೆ ದೊಡ್ದದಾಗುವುದಿಲ್ಲ.ಪ್ರಶಸ್ತಿಗೆ ಜನಪ್ರಿಯತೆಯೂ ಕಾರಣವಲ್ಲ. ಬರೆಯುವನ ಚಾರಿತ್ರವೂ ಮುಖ್ಯವಲ್ಲ  .   ಕೇವಲ ಕೆಲವೇ  ಕೃತಿ ರಚಿಸಿದವರೀಗೂ ಇಂತಹ ಪ್ರಶಸ್ತಿ ದೊರೆಯಬಹುದು.ಗೋಕಾಕರ ಕೃತಿಯನ್ನು ಎಷ್ಟು ಜನ ಓದಿದ್ದಾರೆ, ಹಾಗೂ ಅರ್ಥಮಾಡಿಕೊಂಡಿದ್ದಾರೆ .ಪ್ರಶಸ್ತಿಗಳು ನಿರ್ಧಾರವಾಗುವುದು ಒಂದು ಚೌಕಟ್ಟಿನ ಹಿನ್ನೆಲೆಯಲ್ಲಿ .   ಈ  ,ಚೌಕಟ್ಟಿನಲ್ಲಿ ನಿಮ್ಮ ಕೃತಿ ಇದ್ದಲ್ಲಿ , ಅಂಥವರು ಪ್ರಶಸ್ತಿಯನ್ನು  ಪಡೆಯಬಹುದು ಎಂದು ನನ್ನ ಅನಿಸಿಕೆ.ಸಿಗದಿದ್ದವರು ವ್ಯರ್ಥ ದುಃಖಸ ಬಾರದು.

ಇಲ್ಲಿ ಸಂತೋಷ ಪಡಬೇಕಾದ ವಿಷಯವೆಂದರೆ ಕನ್ನಡಿಗರೀಗೆ ೮ ಜ್ಞಾನಪೀಠ ಪ್ರಶಸ್ತಿ  ದೊರಿತಿದೆ ಎನ್ನುವುದೇ ಮುಖ್ಯ .ಇದು ನಮ್ಮ ಭಾಷೆಯ ಹಿರಿಮೆಯನ್ನು ತೋರಿಸುತ್ತೆ .ನಾವೆಲ್ಲರೂ ,ಹೆಮ್ಮೆ  ಪಡಬೇಕಾದ ವಿಷಯ ಇದು.ಯಾರಿಗೆ ಸಿಗಬೇಕಾಗಿತ್ತು ಎನ್ನುವುದುಕ್ಕೆ ಸಾಹಿತಿಗಳು ತಲೆಕೆಡಿಸಿಕೊಳ್ಳಲಿ .