Saturday, November 26, 2016

INDIAN DEEP SPACE NETWORK- MARS NOT TOO FAR

ನನ್ನ ಪುಸ್ತಕ   ,"  INDIAN DEEP SPACE NETWORK- MARS NOT TOO FAR  " ನ್ನು  , ಸೆಪ್ಟೆಂಬರ್  ೨೮ ,೨೦೧೬ ರಂದು , ಭಾರತೀಯ  ಬಾಹ್ಯಾಕಾಶ  ಸಂಸ್ಥಗೆ

ಸೇರಿದ ,ಭಾರತೀಯ ಡೀಪ್ ಸ್ಪೇಸ್ ನೆಟ್ವರ್ಕ್ ,ಕೇಂದ್ರದಲ್ಲಿ , ಆ ಕೇಂದ್ರದ ನಿರ್ದೇಶಕರಾದ  ಶ್ರೀ ಆಂಜನೇಯಲು  ಅವರು ಬಿಡುಗಡೆ ಮಾಡಿದರು. . ಈ ಸಂದರ್ಭದಲ್ಲಿ ,ಭಾರತೀಯ ಉಪಗ್ರಹ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ . ಶಿವಕುಮಾರ್ ,ಹಾಗೂ ಈ ಸಂಸ್ಥೆಯ  ಉಪನಿರ್ದೇಶಕರಾದ  ಶ್ರೀ .ವಿ.ವಿ. ಶ್ರೀನಿವಾಸನ್ ಮತ್ತು ಹಲವಾರು ತಂತ್ರಜ್ಞರು ,ಉಪಸ್ಥಿತರಿದ್ದರು .

 ಈ ಸಂದರ್ಭದಲ್ಲಿ ಡಾ .ಆಂಜನೇಯಲು ಸ್ವಾಗತ  ಭಾಷಣ ಮಾಡಿದರು.  ಮುಖ್ಯ ಅಥಿತಿಯಾದ ,ಡಾ . ಶಿವಕುಮಾರ್  ರವರು , ಈ ಪುಸ್ತಕದ ಲೇಖಕರಾದ  ಶ್ರೀ ರಾಘವೇಂದ್ರ ಹತ್ವಾರ್  ರವರನ್ನು, ಶಾಲು ಹೊದಿಸಿ ಸನ್ಮಾನಿಸಿದರು . ನಂತರ ," ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ -ಮಾರ್ಸ್ ನಾಟ್ ಟೂ ಫ಼ಾರ್" ಎನ್ನುವ  ಇಂಗ್ಲಿಷ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು

ಈ ಸಂದರ್ಭ ದಲ್ಲಿ  ಡಾ ಆಂಜನೇಯುಲು ಮಾತನಾಡುತ್ತ ಭಾರತೀಯ  ಗಾಢಾಂತರಿಕ್ಷ  ಕೇಂದ್ರ ದ , ಸ್ಥಾಪನೆಯಲ್ಲಿ , ಇಸ್ಟ್ರಾಕ್  ಕೇಂದ್ರದ ,ಪಾತ್ರವನ್ನು ಶ್ಲಾಘಿಸಿದರು  ಡಾ . ಶಿವಕುಮಾರ್ ಮಾತನಾಡಿ , ಭಾರತೀಯ  ಗಾಢಾಂತರಿಕ್ಷ  ಕೇಂದ್ರದ  ನಿರ್ಮಾಣದ ಭಾಗವಹಿಸಿದ  ಎಲ್ಲಾ ಸಂಸ್ಧೆಗಳನ್ನು ,ಹಾಗೂ  ಇದಕ್ಕಾಗಿ ಹಗಲು ರಾತ್ರಿ ದುಡಿದ  ಎಲ್ಲಾ ವ್ಯಕ್ತಿ ಗಳನ್ನು  ನೆನಪಿಸಿಕೊಂಡರು. ಅವರು  ಲೇಖಕ ಶ್ರೀ  ರಾಘವೇಂದ್ರ ಹತ್ವಾರ್ ರವರ ,ಪುಸ್ತಕದಲ್ಲಿ ಈ ಕೇಂದ್ರದ  ನಿರ್ಮಾಣದ  ಎಲ್ಲಾ ಹಂತದಲ್ಲಿ ಎದುರಿಸಿದ ಸಮಸ್ಯೆ , ಕಂಡುಕೊಂಡ  ಪರಿಹಾರ ಎಲ್ಲವನ್ನು ಒಂದು ಕಥೆಯೆ ರೂಪದಲ್ಲಿ ಸಾಮಾನ್ಯರೀಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಭಾರತೀಯ  ಗಾಢಾಂತರಿಕ್ಷ  ಕೇಂದ್ರವು  ಚಂದ್ರಯಾನ  ಹಾಗೂ  ಇತ್ತಿಚೇಗೆ  ಕಳುಹಿಸಿದ , ಮಂಗಳಯಾನ ಉಪಗ್ರಹ ಯಶಸ್ವೀ  ನಿಯಂತ್ರಣದಲ್ಲಿ ವಹಿಸಿದ ಪಾತ್ರವನ್ನು ಹೊಗಳುತ್ತಾ ,ಈ ಪುಸ್ತಕದಲ್ಲಿ ಈ ಎಲ್ಲಾ ವಿಷಯವನ್ನು ಎಲ್ಲರೀಗೂ  ಅರ್ಥ ವಾಗುವ  ರೀತಿಯಲ್ಲಿ ಮಂಡಿಸಿರುವ ವಿಚಾರವನ್ನು  ಶ್ಲಾಘಿಸಿದರು .  ಓದುಗರು ಈ ಪುಸ್ತಕವನ್ನು ಓದಿ ಪ್ರೋಸ್ಸಾಯಿಸುವರೆಂದು ನಂಬಿರುವುದಾಗಿ  ತಿಳಿಸಿದರು

ಡಾ .ಶಿವಕುಮಾರ್  ಈ ಕೇಂದ್ರ ಮಾಜಿ ನಿರ್ದೇಶಕರಾಗಿದ್ದರು ,ಹಾಗೂ ಈ ಕೇಂದ್ರದ ನಿರ್ಮಾಣದಲ್ಲಿ ಅವರು ವಹಿಸಿದ ಪಾತ್ರ ,ಅತ್ಯಂತ ಮಹತ್ತರವಾಗಿದೆ.

ನಂತರ  ಲೇಖಕರಾದ , ಶ್ರೀ .ಹತ್ವಾರ್  ,ತಮ್ಮಪುಸ್ತಕದ ಬಗ್ಗೆ  ಹಾಗೂ  ಈ ಕೇಂದ್ರದ ನಿರ್ಮಾಣ ಹಂತದಲ್ಲಿ  ಆದ ಅನುಭವನ್ನು ಮತ್ತು  ವಹಿಸಿದ  ಎಲ್ಲ ಸಂಸ್ಥೆಗಳು , ವ್ಯಕ್ತಿಗಳ  ಪಾತ್ರವನ್ನು ನೆನಪಿಸಿಕೊಂಡರು. ಅವರು , ಈ ಪುಸ್ತಕ ವನ್ನು ಹೊರತರುವಲ್ಲಿ ಸಹಕರಿಸಿದ ಎಲ್ಲರೀಗೂ ತಮ್ಮ ಕೃತಜ್ಞತೆಯನ್ನು   ವ್ಯಕ್ತ ಪಡಿಸುತ್ತಾ ,ಹಾಗೂ ಈ ಪುಸ್ತಕಕ್ಕೆ  ಮುನ್ನುಡಿಯನ್ನು ಬರೆದುಕೊಟ್ಟ , ಹಿರಿಯ  ವಿಜ್ಞಾನಿ ,ಹಾಗೂ ಭಾರತೀಯ ಭಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷ ,ಡಾ .ಯು .ರಾಮಚಂದ್ರ  ರಾವ್ ತಮ್ಮ ಹ್ರತ್ಪೂರ್ವಕ ಅಭಿನಂದನೆಯನ್ನು  ಸಲ್ಲಿಸಿದರು .

ನಂತರ  ಕೆಲವು ತಂತ್ರಜ್ಞರು ತಮ್ಮ ಹಳೆಯ  ನೆನಪುಗಳನ್ನು ಹಂಚಿಕೊಂಡರು. . ಶ್ರೀ  ಜಯಪ್ರಸಾದ್  ರವರು ವಂದನಾರ್ಪಣೆಯನ್ನು ಸಲ್ಲಿಸಿದರು.




No comments:

Post a Comment