Sunday, December 30, 2012

NAMMA NAAYI KATHE

 ನಮ್ಮ  ನಾಯಿಯ  ಕಥೆ 

ಸುಮಾರು ಹನ್ನೊಂದು ವರುಷದ ಹಿಂದೆ  ನನ್ನ ಮಗನ ಒತ್ತಾಯದ  ಮೇಲೆ ನಾವು ಒಂದು ಜರ್ಮನ್ ಶೆಪರ್ಡ್  ನಾಯಿ ಮರಿಯನ್ನು ಮನೆಗೆ ತರಬೇಕಾಯಿತು.ಅವನೇ ಕೊನಂದ್ದೊರೀಗೆ ಹೋಗಿ ಒಂದು ಮರಿಯನ್ನು ತೆಗೆದುಕೊಂಡು ಬಂದ .ತರುವಾಗ  ಎಲ್ಲ ಮಕ್ಕಳು ಹೇಳುವಂತೆ ನನ್ನ ಮಗ ಮತ್ತು ಮಗಳು ಸಹಾ ತಾವೇ ಸ್ವತಹ ಅದನ್ನು ಚನ್ನಾಗಿ  ನೋಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದರು . ಕ್ರಮೇಣ ನನ್ನ ಮಗಳು ಹಾಗು ಮಗ ಇಬ್ಬರು ತಮ್ಮ ಆಶ್ವಾಸನೆಯನ್ನ  ಎಲ್ಲ ಮಕ್ಕಳು ಮುರಿಯುವಂತೆ ಮುರಿದಿದ್ದರು .ಕೊನೆಗೆ ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮತ್ತು ನನ್ನ ಹೆಂಡತಿಯ ಕೊರಳಿಗೆ ಬಿತ್ತು .

ನಮಗಿಬ್ಬರೀಗೂ ನಾಯಿ ಸಾಕುವ ಅನುಭವವೇನೂ ಇರಲಿಲ್ಲ .ಆದರೂ ಸಹಾ ಅದು ತೋರಿಸುವ ಪ್ರೀತಿಯಿಂದ ನಮಗಿಬ್ಬರೀಗೂ ಅವನೊಬ್ಬ ಕುಟುಂಬದ ಸದಸ್ಯನಾದ .ನನ್ನ ಮಗ ಅವನೀಗೆ ಗ್ರಾಮಿ ಎಂದು ನಾಮಕರಣ ಮಾಡಿದ .ನಾವೆಂದೂ ಸಹಾ ಅವನನ್ನು ಕಟ್ಟಿ ಸಾಕಲಿಲ್ಲ .ನಾಯಿಗಳನ್ನು ಕಟ್ಟಿ ಹಾಕಿದರೆ ಅವುಗಳು ಮುಂದೆ ಅಪರಿಚತರನ್ನು ಕಚ್ಚುವ ಅಭ್ಯಾಸ ಮಾಡಿಕೊಳ್ಳುತ್ತವೆ .ನಮ್ಮ ನಾಯಿ ಯಾರನ್ನು ಕಚ್ಚಬಾರದು ಎನ್ನುವುದು ನನ್ನ ಹೆಂಡತಿಯ ಖಚಿತ ಅಭಿಪ್ರಾಯವಾಗಿತ್ತು .ಗ್ರಾಮಿ ಯಾರನ್ನೂ ಸಹಾ ಕಚ್ಚಲಿಲ್ಲ ,ಅಪರಿಚತರನ್ನು ನೋಡಿ ಬೊಗಳುತಿದ್ದ .ಕ್ರಮೇಣ ಅವನೊಂದಿಗೆ ನಮ್ಮ ಸಂಭಂದ ಗಟ್ಟಿಯಾಗುತ್ತಾ ಹೋಗಿ ಅವನು ತೋರಿಸುವ ನಿಷ್ಕಾಮ ಪ್ರೀತಿ ನಮ್ಮನ್ನು ಅವನೊಂದಿಗಿನ   ಅವಿನಾಭಾವ ಸಂಭಂದಕ್ಕೆ  ನಾಂದಿ ಯಾಯಿತು.ನಮ್ಮ ಮಕ್ಕಳು ಬೇರೆ ದೇಶಕ್ಕೆ ಹೋದ ಮೇಲಂತೂ ನಮಗೆ ಅವನೇ ಮನೆ ಮಗುವಾದ .

ನಾಯಿಗಳ ಎನನ್ನು  ಅರಿಯದ ನಾವು ಅವನಿಂದ ಬಹಳ ಕಲಿತೆವು.ಅವನು ಮನೆಯವರು ಹಾಕಿದ ಊಟ ಬಿಟ್ಟು ಯಾರು ಏನೇ ಕೊಟ್ಟರೂ ತಿನ್ನುತ್ತಿರಲಿಲ್ಲ .ಅವನು ಶಾಖಾಹಾರಿ ಆಗಿ ಬೆಳೆದ . ನನ್ನ ಹೆಂಡತಿ ಮಗಳ ಮನೆಗೆ ಆರು ತಿಂಗಳು ಹೋದಾಗ ,ನಾನು ಆಫೀಸಿನಿಂದ ಬರುವುದನ್ನೇ ಕಾಯುತಿದ್ದ .ಸುಮಾರು ೧೨ ಗಂಟೆಗೂ ಹೆಚ್ಚಿಗೆ ತನ್ನ ನ್ಯಾಚುರಲ್ ಕಾಲ್ ಕಟ್ಟಿ ಕೊಂಡು ನಾನು ಬಂದ ಮೇಲೆ ಹೊರಗೆ ಹೋಗಿ ತನ್ನ ಭಾದೆಯನ್ನು ತೀರಿಸಿ ಕೊಳ್ಳುತಿದ್ದ .ಅವನ ಸಮಯ ಪ್ರಜ್ಞೆ ಅತ್ಯಂತ ವಿಶಿಷ್ಟ ವಾದದ್ದು .ಬೆಳಿಗ್ಗೆ ,ಸಾಯಂಕಾಲ ,ರಾತ್ರಿ  ಅವನು ಗಂಟೆ ಹೊಡೆದಂತೆ ಸಮಯಕ್ಕೆ ಸರಿಯಾಗಿ ನನ್ನ ಹತ್ತಿರ ಬಂದು ಕುಳತು ನನ್ನ ಮುಖ ನೋಡುತ್ತಾ ಎಮೋಷನಲ್  ಬ್ಲಾಕ್ ಮೈಲ್  ಮಾಡುತಿದ್ದುದನ್ನು ನೋಡುವುದಕ್ಕೆ ಚೆಂದ .ಅವನಿಗೆ ನಾವು   ಆಡುವ ಸಾಮಾನ್ಯ  ಮಾತುಗಳು ಅರ್ಥವಾಗುತಿದ್ದವು .ಅವನನ್ನು ಡಾಕ್ಟರ ಹತ್ತಿರ ಕೊಂಡು  ಹೋಗುವಾಗ ನಾವು ಗುಟ್ಟಾಗಿ ಮಾತನಾಡಿ ಕೊಳ್ಳ ಬೇಕಾಗಿತ್ತು .ಅವನೀಗೆ  ಕಾರಲ್ಲಿ ಅಥವಾ ಆಟೋದಲ್ಲಿ ಹೋಗುವುದಂದರೆ ತುಂಬಾ ಖುಷಿ .ಆಟೋ ನೋಡಿದರೆ ಸಾಕು ಅದರಲ್ಲಿ ನುಗ್ಗಿ ಬಿಡುತ್ತಿದ್ದ .
ಗ್ರಾಮಿ  ಮೊದಲು ಹೀಗಿದ್ದ
ಈ ಎರಡು ವರ್ಷದ ಹಿಂದೆ ಅವನೀಗೆ ಒಂದು ವಿಷಿಷ್ಟ ಕಾಯಿಲೆ -ಕಾಲಿನ ಪಾದದ ನೋವು ಶುರುವಾಯಿತು .ಡಾಕ್ಟರು  ಅವನೀಗೆ ಒಂದು ವರ್ಷಕ್ಕಿಂತ ಜಾಸ್ತಿ ಆಂಟಿಬಯೋಟಿಕ್   ಮದ್ದು ಕೊಟ್ಟರೂ ಸಹಾ ನೋವು ಹೆಚ್ಚಾಗುತ್ತಾ ಹೋಯಿತು .ಪ್ರತಿ ದಿನ ಅವನ ಕಾಲನ್ನು ವಿನೆಗರ್ ನಲ್ಲಿ ತೊಳೆದು ಡ್ರೈ ಮಾಡಿ ಮದ್ದು ಹಾಕಬೇಕಿತ್ತು .ಅವನಿಗೆ ತಿನ್ನಲು ಆಂಟಿಬಯೋಟಿಕ್ ಮಾತ್ರೆ ಮೂರು ಬಾರಿ ಕೊಡಬೇಕಾಗಿತ್ತು .ಇದನೆಲ್ಲಾ  ನನ್ನ  ಹೆಂಡತಿ ಯಾವುದೆ  ಬೇಸರವಿಲ್ಲದೆ ಮಾಡುತಿದ್ದಳು  .ಕ್ರಮೇಣ ಅವನ ಕಾಯಿಲೆ ಉಲ್ಭಣ ವಾಗುತ್ತ  ಹೋಯಿತು .ಅವನೀಗೆ ಹತ್ತಾರು ಇಂಜೆಕ್ಷನ್ ಕೊಟ್ಟರೂ ಯಾವುದೇ ಪರಿಣಾಮ ಆಗಲಿಲ್ಲ .ಸುಮಾರು ಮೂರು ನಾಲ್ಕೂ ಡಾಕ್ಟರ್ ನೋಡಿ ಮದ್ದು ಮಾಡಿದರೂ ಅವನ ರೋಗ ಹೆಚ್ಚಾಯಿತೆ ವಿನಃ ಯಾವುದೇ ಪರಿಣಾಮ ಆಗಲಿಲ್ಲ .ಎಲ್ಲಾ ಡಾಕ್ಟರಗಳೂ ಈ ಸಮಸ್ಯೆಗೆ ಯಾವುದೇ ರೀತಿ ಪರಿಹಾರ ನೀಡದಾದರು .ಕೊನೆಗೆ ಈ ಕಾಯಿಲೆಗೆ ಮದ್ದಿಲ್ಲ ಎನ್ನುವ ಮೂಲಕ ಕೈ ತೊಳೆದುಕೊಂಡರು. ಕ್ರಮೇಣ ಅವನ ಕಾಯಿಲೆ ಕಾಲಿಂದ ಮೈಗೆ ,ಕೊನೆಗೆ ಬಾಯಿಗೆ ಹರಡಿ ಅತ್ಯಂತ ನೋವನ್ನು ಅನುಭವಿಸ ತೊಡಗಿದ .ನಾವು ಪ್ರತಿದಿನ ನಾಲ್ಕು ಬಾರಿ ಕಾಲ್ಗೆ ಸಾಕ್ಸ್ ಹಾಕಿಕೊಂಡು ವಾಕಿಂಗ್ ಕರೆದುಕೊಂಡು ಹೋಗಬೇಕಿತ್ತು .ಅವನ ಕಾಲಿಗೆ  ಸಾಕ್ಸ್ ಹಾಕುವುದು,ದೈಪೆರ್ ಹಾಕುವುದು ಗಾಯಕ್ಕೆ ಟ್ರೀಟ್ಮೆಂಟ್ ಕೊಡುವುದು ಸುಮಾರು ದಿನಕ್ಕೆ ನಾಲ್ಕು ಘಂಟೆ ಕೆಲಸ ಬಹಳ ನಿಷ್ಠೆಯಿಂದ ನನ್ನ ಮಡದಿ ಮಾಡುತಿದ್ದಳು ಎಂದರೆ ಅತಿಶಯೋಕ್ತಿ ಆಗಲಾರದು  .ಕೊನೆಗೆ ಅವನು  ಮಲಗಿದ ಜಾಗದಿಂದ ಏಳಲಾಗದೆ ನ್ಯಾಚುರಲ್ ಕಾಲ್ ಹೋಗಲಾರದೆ ಸ್ಥಿತಿಗೆ  ತಲುಪಿದಾಗ ,  ಮಲಗಿದಲ್ಲೇ ಮಾಡತೊಡಗಿದ .ರಸಿಗೆ , ಮತ್ತು ನ್ಯಾಚುರಲ್ ಕಾಲ್ ಗಳಿಂದ ಆದ ನಾತ  ತಾಳಲಾರದ ಸ್ಥಿತಿಗೆ ಬಂದಾಗ ನಮಗೆ ಏನು ಮಾಡಬೇಕೆಂದು ದಿಕ್ಕೇ ತೋಚದಾಯಿತು.ಕೊನೆಗೆ ,ಡಾಕ್ಟರ್  ಇದು ಗುಣವಾಗುವ ಬಗ್ಗೆ ಯಾವುದೇ ಭರವಸೆ ನೀಡದಾಗ  , ನಾವು ಒಂದು ಕಷ್ಟಕರವಾದ ನಿರ್ಧಾರ ತೆಗೆದುಕೊಳ್ಳ ಬೇಕಾಯ್ತು .ಅವನ ಪಡುವ ಮೂಕ  ವೇದನೆಯನ್ನು ನೋಡುವುದೇ  ಸಾಧ್ಯವಾದಾಗ ,ಅವನನನ್ನು ಸುಖವಾಗಿ  ಕಳುಹಿಸುವ ನಿರ್ಧಾರಕ್ಕೆ ಬಂದೆವು .ಅವನ ಕೊನೆಯದಿನಗಳನ್ನು  ನೆನಸಿ ಕೊಂಡಾಗ ದುಃಖ  ಉಕ್ಕಿ ಬರುತ್ತೆ.ನಾಯಿ ಪ್ರೀತಿಯೊಂದನ್ನು ಬಿಟ್ಟು ಏನನ್ನು ಕೇಳುವುದಿಲ್ಲ .ಅದಕ್ಕೆ ಎಲ್ಲ ರೀತಿಯ ಕಷ್ಟಗಳನ್ನು ಸಹಿಸುವ ಸಕ್ತಿ ಇದೆ .ಅದು ಸತ್ತಾಗ ಅದರ ಪ್ರೀತಿ ನಮ್ಮನ್ನು ಕಾಡುತ್ತದೆ .ಯಾವುದೇ ಮನುಷ್ಯ ಆ ನಿಷ್ಕಳಂಕ ಪ್ರೀತಿಯನ್ನ ತೋರಿಸಲಾರ . ಕೊನೆಗೆ ಅವನೀಗೆ ಒಂದು ಉತ್ತಮವಾದ ಜಾಗದಲ್ಲಿ ಅಂತ್ಯ ಕ್ರೀಯೆ ಮಾಡಿದೆವು.ಇದಕ್ಕೆ ನಾವು ಮೇನಕಾ ಗಾಂಧಿ ನಿರ್ಮಸಿದ  ಜಾಗಕ್ಕೆ ಚಿರರುಣಿಗಳು .  ಇಂತಹ ಉತ್ತಮ ಜೀವಕ್ಕೆ ದೇವರು ಯಾಕೆ ಇಷ್ಟು ಕಷ್ಟ ಕೊಟ್ಟ ಎನ್ನುವುದೇ ನಮಗೆ ಅರಿವಾಗದು.ಅವನ ಅತ್ಮಕ್ಕೆ ಶಾಂತಿ ದೊರೆಯಲಿ .
            ಸೂಚನೆ : ನಾಯಿ ಸಾಕುವ ಮುನ್ನ ಆ ಪ್ರಾಣಿಯ   ಬಗ್ಗೇ ಹೆಚ್ಚಿನ ಅಧ್ಯಯನ ಮಾಡಿಕೊಳ್ಳುವುದು ಮುಕ್ಯ .ಎಲ್ಲರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ತುಂಬಾ ಆವಶ್ಯಕ .

ಗ್ರಾಮಿ  ಕೊನೆಯ ದಿನಗಳು