Sunday, May 1, 2011

ಭ್ರಷ್ಟರ ಬಗ್ಗೆ ನಮಗೇಕಿಷ್ಟು ಗೌರವ ಮತ್ತು ಪ್ರೀತಿ

ಭ್ರಷ್ಟರ ಬಗ್ಗೆ ನಮಗೇಕಿಷ್ಟು ಗೌರವ ಮತ್ತು ಪ್ರೀತಿ ?

ಒಬ್ಬ ಕಳ್ಳ  ಹತ್ತು ರುಪಾಯಿ ಕದ್ದರೂ ಸಹಾ ಅವನನ್ನು  ಪೊಲೀಸರು ಹೊಡೆದು ಜೈಲಿಗೆ ಹಾಕ್ತಾರೆ .ಅವನಿಗೆ ಜೀವನ ಪರ್ಯಂತ ಕಳ್ಳ ಎಂಬ ಹಣೆಪಟ್ಟಿ ಬೇರೆ .ಒಬ್ಬ ಡಕಾಯಿತ ಲೂಟಿ ಮಾಡಿದರೆ ಅವನನ್ನು ಶೂಟ್ ಮಾಡ್ತಾರೆ ಇಲ್ಲ ಜೈಲಿ ತಳ್ಳಿ ಶಿಕ್ಷೆ ಕೊಡ್ತಾರೆ .ಇವರಿಬ್ಬರು ಮಾಡುವ ತಪ್ಪು ಒಬ್ಬ ಭ್ರಷ್ಟನಿಗೆ ಹೋಲಿಸಿದರೆ ಅತಿ ಸಣ್ಣ ತಪ್ಪು.ಇವರು ಸ್ವಂತ ಹೊಟ್ಟೆಪಾಡಿಗಾಗಿ ಕಳ್ಳ ತನ ಮಾಡುತ್ತಾರೆ.ಆದರೆ  ಒಬ್ಬ ಭ್ರಷ್ಟ ಸಮಾಜವನ್ನೇ ಲೂಟಿಮಾಡಿ ಹತ್ತು ತಲೆಮಾರಿಗಾಗುವಸ್ಟು ಆಸ್ತಿ ಯನ್ನು ಮಾಡುತ್ತಾನೆ.ಇವನಿಂದ ಆಗುವ ಅನಾಹುತಗಳು ಒಂದೇ ಎರಡೇ .

ಭ್ರಷ್ಟ ಅಧಿಕಾರಿ ಜನರ ರಕ್ತ ಕುಡಿದು ಹಣ ಮಾಡುತ್ತಾನೆ.ಒಂದು ಮಗು ಹುಟ್ಟು ಸಾವಿನ ಮದ್ಯ ಹೋರಾಡುತ್ತಿದ್ದರೂ ,ಮಗುವಿನ ತಾಯಿ ಹಣ ಕೊಡ ಲಾಗದೆ ಗೋಳಿಡುತ್ತಿದ್ದರೂ ಕಣ್ಣೆತ್ತಿ ನೋಡದ ಹೃದಯ ಹೀನ ವೈದ್ಯ,ತಾನು ಕಟ್ಟಿರುವ ಕಳಪೆ ಕಟ್ಟಡ ಕುಸಿದು ಬಿದ್ದು ನೂರಾರು ಜನರ ಬಲಿತೆಗದುಕೊಂಡರೂ  ಹೇಸದ ಕ್ರೂರಿ ,ಭ್ರಷ್ಟ ಇಂಜಿನಿಯರ್ ,ಶ್ರೀಸಾಮಾನ್ಯನ ತೆರಿಗೆ ಹಣವನ್ನು ಲೂಟಿ ಹೊಡೆದು ,ಸಮಾಜ ವಿರೋಧಿ ಶಕ್ತಿ ಗಳೊಂದಿಗೆ ಕೈಜೋಡಿಸಿ ,ದೇಶಕ್ಕೆ ಅನ್ಯಾಯ ವೆಸಗುತ್ತಿರುವ ,ಭ್ರಷ್ಟ ರಾಜಕಾರಿಣಿ ,ಈ ಮೂವರಲ್ಲಿ ಯಾರು ಕಳ್ಳರು,ಡಕಾಯಿತರಿಗಿಂತ ಉತ್ತಮರು ?ಇವರು ,ಮಾಡುವ ಸಮಾಜ ದ್ರೋಹಕ್ಕೆ ,ಯಾವ ಶಿಕ್ಷೆ ಕೊಡಬಹುದು ಎಂದು ಯಾರಾದರೂ ಯೋಚಿಸಿದ್ದಾರಾ? ಇವರ ಧನದಾಹಕ್ಕೆ ಇತಿ ಮಿತಿ ಅನ್ನುವುದೇ ಇಲ್ಲ.
ಆದರೂ ಸಹಾ ಸಮಾಜದಲ್ಲಿ ಇವರು ಗಣ್ಯರು .ಇವರೂ ಮಾಡಿದ ಲೂಟಿಗೆ ಯಾವುದೇ ಶಿಕ್ಷೆ ಇಲ್ಲ .ವಿಪರ್ಯಾಸವೆಂದರೆ ಇವರನ್ನು ಜನರು ಪ್ರೀತಿಸಿ ,ಗೌರವಿಸಿ , ಹಾಡಿ ಹೊಗಳುತ್ತಾರೆ .ಇದಕ್ಕೆ ಮೂಲ ಕಾರಣ ಇವರು ಸಮಾಜಕ್ಕೆ ಮಾಡುವ ಅನ್ಯಾಯವನ್ನು ಜನರು ಅತಿ ಹಗುರವಾಗಿ ಪರಿಗಣಿಸುತ್ತಾರೆ.ಭ್ರಷ್ಟತೆಯಿಂದ ಗಳಿಸಿದ ಹಣಕ್ಕೆ ಎಲ್ಲಿಯವರೆಗೂ ಮರ್ಯಾದೆ ಇರುವುದೋ ಅಂದಿನ ವರೆಗೆ ಭ್ರಷ್ಟಾಚಾರ ಇರುತ್ತೆ .
ಈಗ ಹಣ ಗಳಿಸುವುದು ಮುಖ್ಯವಾಗಿದೆ ವಿನಃ ಗಳಿಸುವ ಮಾರ್ಗ ಮುಖ್ಯವಾಗಿಲ್ಲ.ಹೀಗಿರುವಾಗ, ಶ್ರೀಸಾಮಾನ್ಯನ ನಿರ್ಲಕ್ಷೆ ಇನ್ನೊಂದು ಕಡೆ ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದೆ . ಇಂತಹ ಸತ್ತಂತಿಹ ಶ್ರೀಸಾಮಾನ್ಯನನ್ನು ಬಡಿದೆಬ್ಬಿಸುವ ಸಾಹಸವನ್ನು ಅಣ್ಣಾ ಹಜಾರೆ ಮಾಡಿದ್ದಾರೆ .ಇವರ ಪ್ರಯತ್ನ ಫಲ ಕೊಡಲಿ ಎಂದು  ನಾವು ಆಶಿಸೋಣ .