Friday, November 29, 2013

Rakshasaru


  1.  ರಾಕ್ಷಸರರು 


ಕವಿ ಗೋಪಾಲಕೃಷ್ಣ  ಅಡಿಗರು  ಬಹಳ  ಹಿಂದೆ ರಕ್ಷಸರರು ಎಂಥ ಒಂದು ಪ್ರಭಂದವನ್ನು  ಬರೆದದ್ದು ನನಗೆ ನೆನಪಿದೆ. ರಾಕ್ಷಸರು ಅಂದರೆ  ಯಕ್ಷಗಾನದ ಪಾತ್ರಧಾರಿಯಂತೆ  ಬಣ್ಣ ಬಣ್ಣದ ವೇಷ ದರಿಸಿರುವುದಿಲ್ಲ. ಅವರು  ಎಲ್ಲರಂತೆ    ಸಭ್ಯರಂತೆ ಕಾಣುತ್ತಾರೆ .ಮೃದು  ಭಾಷಿಗಳಾ ಗಿರುತ್ತಾರೆ . ಆದರ್ಶದ  ಮಾತು ಅವರ ತುಟಿಯಲ್ಲಿ  ಇರುತ್ತದೆ.  ಅವರು ಸ್ನೇಹ ಪ್ರಿಯರು ಆಗಿರಬಹುದು .

ಕ್ರಮೇಣ ಅಧಿಕಾರ ,ಸ್ಥಾನ , ಮಾನ  ಸಿಕ್ಕಿದನ್ತೆಲ್ಲ  ಯಿವರು ಬದಲಾಗುತ್ತ ಹೋಗುತ್ತಾರೆ . ಇವರ  ಜನಪರ  ಕಾಳಜಿ  ಕಡಿಮೆ ಆಗುತ್ತೆ . ತಾನೊಬ್ಬ  ದೊಡ್ಡ  ಹೀರೋ  ಅಂತ  ಭಾವಿಸಲಿಕ್ಕೆ  ಸುರು ಮಾಡುತ್ತಾರೆ . ತಾನು ಮುಂದೆ ಬರಲು ಕಾರಣರಾದವರನ್ನ  ದೂರ ಇಡಲು ಸುರು ಮಾಡುತ್ತಾರೆ . ಹೊಸ ಸಂಭಂದವನ್ನು ,ಹೊಸ ಚಟಗಳನ್ನು  ಪಡೆದುಕೊಳ್ಳುತ್ತಾ  ತಮ್ಮನ್ನೇ ತಾವು ಪ್ರೀತಿಸುತ್ತ  ನನ್ನನ್ನು ಯಾರು ಕೇಳುವರಿಲ್ಲ ಎಂಬುವಂತೆ  ವರ್ತಿಸತೊಡಗುತ್ತಾರೆ . ಅಲ್ಲಿಂದ ಇವರ ಅವಸಾನ

ಶುರುವಾಯಿತೆಂದು  ತಿಳಿಯಬೇಕು . ಅರುಣ್ ತೇ ಜಪಾಲ್  ಆಗಿದ್ದು  ಇದೇ .ರಾಜಕಾರಣಿ ಗಳೀಗೆ  ಸಿಂಹ   ಸ್ವಪ್ನ ವಾಗಿದ್ದ  ಈತ   ತಾನೊಬ್ಬ  ಹೀರೋ  ಎಂದು ಭಾವಿಸತೊಡಗಿದ . ಹೊಗಳು  ಭಟರನ್ನು  ತನ್ನ ಸುತ್ತಲು  ಬೆಳೆಸಿಕೊಂಡ . ನೈತಿಕ ಅಧ :ಪ ಥ ನದ ದಾರಿ ಹಿಡಿದ . ಈ ಗ  ತನ್ನ ಸುತ್ತ ಯಿರುವ ಎಲ್ಲ ಹೊಗಳು  ಭಟ್ಟರು  ಮಾಯವಾಗುತ್ತಾರೆ . ಆತ  ಏಕಾಂಗಿ ಆಗುತ್ತಾನೆ .

ಇವನು ಒಂದು ರಾಕ್ಷಸ ಎಂಬ ಅರಿವು  ಮೊದಲೇ  ಎಲ್ಲರೀಗೂ  ಗೊತ್ತಾಗಿದ್ದರೆ  ಈತನ ಅಧ:ಪಥನ ಆಗುತ್ತಿರಲಿಲ್ಲ . ಓಬ್ಬ  ಪ್ರಥಿಬಾವಂಥನ  ಅವಸಾನ ವಾಗುತ್ತಿರಲಿಲ್ಲ . ನೈತಿಕ ತೆಯನ್ನು  ಬೇರೆಯವರಿಂದ ಬಯಸುವವರು ತಾವು ಪರಿಶುದ್ದರಾಗಿರಬೇಕಂಬ  ಕನಿಷ್ಟ  ಅರಿವು  ಈತನಿಗಿಲ್ಲದೆ  ಹೋ ಯಿತಲ್ಲ  ಎನ್ನುವುದೇ ದುರ್ದೈವ . ಜೀವನದಲ್ಲಿ  ಮೇಲೆ ಹೋಗುವುದು ತುಂಬಾ ಕಷ್ಟ . ಕೆಳೆಗೆ ಬೀಳುವುದು ತುಂಬಾ ಸುಲಭ ."

No comments:

Post a Comment