ಕನ್ನಡ ಮಾಧ್ಯಮ-ಒಂದು ಚಿಂತನೆ
ನಲವತ್ತು ವರ್ಷದ ಹಿಂದಿನ ಮಾತು .ನಾನು ಒಂದು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿಯಲ್ಲಿ ಓದುತ್ತಿದ್ದೆ .ಆ ಕಾಲದಲ್ಲಿಯೂ ಸಹಾ ,ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ ಅಂದರೆ , ಅವರು ಪುಂಡು ಪೋಕರಿಗಳು, ಇರಬೇಕು ಅಂಥ ಎಲ್ಲ ಶಿಕ್ಷಕರ ಅಭಿಮತ .ಅದು ಇಂದಿಗೂ ಬದಲಾಗಿಲ್ಲ ಅನ್ನುವುದಕ್ಕಿಂತ ,ಅಸಡ್ಡೆ ಜಾಸ್ತಿ ಆಗಿದೆ ಅನ್ನಬಹುದು.
ಕನ್ನಡ ಮಾಧ್ಯಮದವರಾದ ನಾವು ಅನುಭವಿಸಿದ ,ಕೀಳರಿಮೆ ಹಾಗೂ ಅಪಹಾಸ್ಯ ,ಯಾರಿಗೂ ಬೇಡ ಅಂಥ ನನ್ನ ಅನಿಸಿಕೆ.
ನಾನು ಮೊದಲಬಾರಿ ಕನ್ನಡ ಮಾದ್ಯಮದಲ್ಲಿ ಮೊದಲ ಧರ್ಜೆ ಯಲ್ಲಿ [ಎಸ್ ಎಸ್ ಲ್ ಸಿ ] ಪಾಸಾಗಿ ಶಾಲೆಗೆ ಹೋದಾಗ ,ನನ್ನ ಶಿಕ್ಷಕರು ಕೇಳಿದ
ಮೊದಲ ಪ್ರಶ್ನೆ ",ನೀ ಎಲ್ಲಿದ್ದಿಯಯ್ಯ ?ನಿನ್ನನ್ನು ನಾವು ನೋಡೇಯಿಲ್ಲವಲ್ಲ " ಅಂದಿದ್ದಲ್ಲದೆ ,"ನಿನಗೇನಯ್ಯ ಇಂಗ್ಲಿಷ್ ಮೀಡಿಯಂ ತೆಗೆದುಕೊಳ್ಳಲಿಕ್ಕೆ ಧಾಡಿಯಾಗಿತ್ತು " ಅನ್ನುವ ಉಪದೇಶ ಬೇರೆ .ನಾನು ಮುಂದೆ ಪಿ ಯು ಸಿ ಮತ್ತು ಇಂಜಿನಿಯರಿಂಗ್ ನಲ್ಲಿ ಇಂಗ್ಲಿಷ್ ಪಾಸು ಮಾಡಲು ಪಟ್ಟ ಪರದಾಟ ಅಸ್ಟಿಸ್ಟಲ್ಲ.
ಅಂತೂ ಇಂತೂ ಇಂಜಿನಿಯರಿಂಗ್ ಮುಗಿಸಿ, ಒಂದು ಪರಿಸ್ಟಿತ ಸೌ೦ಸ್ತೆ ಯಲ್ಲಿ ಕೆಲಸಕ್ಕೆ ಸೇರಿದ್ದಾಯಿತು.ಅಲ್ಲಿಯೂ ನಮ್ಮ ಪರದಾಟ ತಪ್ಪಿದ್ದಲ್ಲ .ನಮ್ಮ ಇಂಗ್ಲಿಷ್ ಮಾತನಾಡುವ ವೈಕರಿ ನೋಡಿ ಎಲ್ಲರೂ ನಮ್ಮನ್ನು ಒಬ್ಬ ಹಳ್ಳಿಮುಕ್ಕ ನಂತೆ ನೋಡುವುದು ಮತ್ತು ಹಾಸ್ಯ ಮಾಡುವುದು ಸಾಮಾನ್ಯವಾಯಿತು.ಸರಿಯಾಗಿ ಇಂಗ್ಲೀಷನಲ್ಲಿ ಮಾತನಾಡಲು ಬಾರದವರು ಅತೀ ದಡ್ಡರು ಅನ್ನುವ ಅಭಿಪ್ರಾಯ ಅಂದೂ ಇತ್ತು ಮತ್ತು ಇಂದೂ ಇದೆ . ಕ್ರಮೇಣ ನನ್ನ ಭಾಷಾ ಜ್ಞಾನವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡು ಕನ್ನಡದಲ್ಲಿ ಹಾಗೂ ಇಂಗ್ಲಿಷನಲ್ಲಿ ಒಂದೊಂದು ಪುಸ್ತಕ ಬರೆದೆ.
ಹಾಗಾದರೆ ಅಂತಹ ಪರಿಸ್ಟಿತಿಯಲ್ಲಿಯೂ ಸಹಾ ನಾವು ಕನ್ನಡ ಓದಲು ಒಂದು ಮುಖ್ಯ ಕಾರಣವಿತ್ತು .ನಮಗೆ ಕನ್ನಡವನ್ನು ತುಂಬಾ ಚೆನ್ನಾಗಿ ಪಾಠ ಮಾಡುವ ಶಿಕ್ಷಕರಿದ್ದರು .ಕನ್ನಡದ ಬಗ್ಗೆ ಕಿಚ್ಹೆಬ್ಬಿಸುವಂತಹ ಅನಕೃ ಅಂತಹ ಲೇಖಕರು ಹಾಗೂ ಭಾಷಣಕಾರರಿದ್ದರು .ಕುವೆಂಪು ,ಕಾರಂತ ,ಬೇಂದ್ರೆ,ಮಾಸ್ತಿ ,ಗೋಕಾಕ ರಂಥಹ ಉದ್ದಾಮ ಪಂಡಿತರು ಹಾಗೂ ಬರಹಗಾರರು ,ಕವಿಗಳಿದ್ದರು.ಡಿ ವಿ ಜಿ ಅಂತಹ ದಾರ್ಶನಿಕ ಕವಿಗಳಿದ್ದರು .ಅಡಿಗರಂಥಹ ನವ್ಯ ಪರಂಪರೆಯ ಕವಿಗಳಿದ್ದರು.
ಇನ್ನೂ ನೂರಾರು ಪ್ರಸಿದ್ದ ಬರಹಗಾರರಿದ್ದರು .[ ಉದಾ :ತರಾಸು ,ಬೀಚಿ,ನಿರಂಜನ ಇನ್ನಿತರರು ].ಸಿನಿಮಾದಲ್ಲಿ ರಾಜಕುಮಾರರಂತಹ ಮೇರು ನಟರಿದ್ದರು.ಇವರೆಲ್ಲರೂ ರಾಜಕಾರಣಿಗಳ ಮೊರೆಹೋಗಲಿಲ್ಲ. ಪ್ರಶಸ್ತಿ ,ಬಿರುದಾವಳಿಗೆ ಹೊಡೆದಾಡಲಿಲ್ಲ .ಪ್ರಸಸ್ತಿಗಳು ಅವರ ಬೆನ್ನಹತ್ತಿ ,ಅರಸಿ ಬಂದವು .
ಈಗ ,ಉತ್ತಮ ಶಿಕ್ಷಕರಿಲ್ಲ .ಬರಹಗಾರರು ರಾಜಕಾರಣಿಗಳ ಮರ್ಜಿಗಾಗಿ ಓಡಾಡುತ್ತಿದ್ದಾರೆ .ಪ್ರಶಸ್ತಿ ,ಬಿರುದಾವಳಿಗೆ ಗುಂಪುಗಾರಿಕೆ ನಡೆಸುವುದನ್ನು ಬಿಟ್ಟು ಯಾವುದೇ ಉತ್ತಮ ಕೃತಿಯನ್ನು ಬರೆದ ,ಉದಾಹರಣೆಯಿಲ್ಲ .ಇವರು ಕನ್ನಡಕ್ಕಾಗಿ ಕೆಲಸ ಮಾಡದಿದ್ದರೂ ಕನ್ನಡಕ್ಕಾಗಿ ಬೊಬ್ಬೆ ಹೊಡೆಯುದನ್ನು ಬಿಟ್ಟಿಲ್ಲ.ಸಿನಿಮಾದಲ್ಲಿ ಕನ್ನಡದ ಮಾತನಾಡಲೂ ಬರದ ಕಲಾವಿದರೇ ತುಂಬಿದ್ದಾರೆ.ಇವರಿಂದ ಕನ್ನಡ ಹೇಗೆ ಬೆಳೆದೀತು ದೇವರೇ ಬಲ್ಲ.
ಒಂದು ಭಾಷೆ ಉಳಿಯಲು ಅದರ ಸರ್ವತೋಮುಖ ಬೆಳವಣಿಗೆಯಾಗಬೇಕು.ಇದು ಇಂದಿನದಿನಗಳಲ್ಲಿ ಸಾಧ್ಯವೇ.? ಭಾಷೆಗೂ ಮತ್ತು ನಮ್ಮ ಬದುಕೀಗೂ ಗಾಢ ಸಂಭಂದ ವಿದೆ .ನಾವು ಇಂಗ್ಲಿಷ್ ಪ್ರೇಮಿಸುವುದು ರೊಟ್ಟಿಗಾಗಿ ಮತ್ತು ಗೇಣು ಬಟ್ಟೆಗಾಗಿ.ನಾವು ಕನ್ನಡ ಕಲಿಯಬೇಕು ನಮ್ಮತನದ ಉಳಿವಿಗಾಗಿ ನಮ್ಮ ಬದುಕಿಗೆ ಅರ್ಥ ನೀಡುವುದಕ್ಕಾಗಿ.ಇವೆರಡು ನಮಗೆ ಅನಿವಾರ್ಯ ಅನ್ನುವುದನ್ನು ನಾವು ತಿಳಿದಲ್ಲಿ ಬದುಕು ಸುಗಮವಾಗುತ್ತದೆ .
No comments:
Post a Comment