ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ತುಂಬಾ ಅದ್ದೂರಿಯಾಗಿ ನಡೆಯಿತು ಎಂದರೆ ತಪ್ಪಾಗಲಾರದು .ಇದರಿಂದ ರಾಜ್ಯ ಸರಕಾರಕ್ಕೆ ಎಷ್ಟು ಲಾಭವಾಗಿದೆ ಎನ್ನುವದಕ್ಕಿಂತ ನಮ್ಮ ವರ್ಚಸ್ಸು ವಿಶ್ವ ಮಟ್ಟದಲ್ಲಿ ಎಷ್ಟು ಬೆಳೆಯಿತು ಎಂಬುದು ಮುಖ್ಯ .
ಈ ಸಮ್ಮೇಳನವನ್ನು ಯಾರು ಉದ್ಘಾಟಿಸಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಯ ವಿಚಾರಕ್ಕೆ ಎಡೆಮಾಡಿ ಕೊಟ್ಟರೂ ಸಹಾ ರಾಜ್ಯ ಸರಕಾರ ಪಟ್ಟು ಬಿಡದೆ ಮಾನ್ಯ ನಾರಾಯಣಮೂರ್ತಿಯವರರಿಂದ ಈ ಕೆಲಸ ಮಾಡಿರುವುದು ತುಂಬಾ ಶ್ಲಾಘನೀಯ .ನಾವು ಯಾವುದೇ ಕೆಲಸ ಮಾಡಲು ಹೋದರೂ ಸಹಾ ಒಂದಲ್ಲ ಒಂದು ಅಪಸ್ವರಗಳು ಬರುವುದು ಸಹಜ.ಆದರೆ ನಾರಾಯಣ ಮೂರ್ತಿಯವರು ಇದಕ್ಕೆ ಅರ್ಹ ವ್ಯಕ್ತಿಯೇ ಎಂದು ಕೇಳಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಕನ್ನಡಿಗರೆಲ್ಲ ಉತ್ತರ ನೀಡಿದ್ದಾರೆ.
ಮಾನ್ಯ ನಾರಾಯಣಮೂರ್ತಿ ಹಾಗೂ ಸರ್ ಮ್ ವಿಶ್ವವೇಶ್ವರಯ್ಯ ಇಬ್ಬರು ಕೋಲಾರ ದವರಾಗಿರುವುದು ಕಾಕತಾಳಿಯವಾದರೂ ಸಹಾ,ಕರ್ನಾಟಕಕ್ಕೆ ಈ ಇಬ್ಬರ ಕೊಡುಗೆ ಅಪಾರ.ಸರ್.ಮ್ .ವಿ ಸ್ವಾತಂತ್ರ ಪೂರ್ವದಲ್ಲಿ ಮಾಡಿದ ಕೆಲಸದಿಂದ ಹಳ್ಳಿಯ ಜನರ ಬದುಕನ್ನೇ ಬದಲಾಯಿಸಿದ ಮಹಾಪುರುಷ. ಇಂದಿಗೂ ಕರ್ನಾಟಕದ ಎಷ್ಟೋ ಕಡೆಯಲ್ಲಿ ಅವರ ಫೋಟೋ ಇಟ್ಟು ಜನರೂ ಪೂಜಿಸುತ್ತಾರೆ.ಅವರು ಬಹಳ ಹಿಂದೆಯೇ "indutrialise or perish " ಎಂದು ಹೇಳಿದವರು.ಅವರೇನಾದರೂ ಈಗ ಇದ್ದಿದ್ದರೆ ,ಅವರನ್ನು ಬಹುರಾಷ್ಟ್ರೀಯ ಸೌನ್ಸ್ತೆ ಏಜೆಂಟ್ ಎಂದು ಕರೆದು ಬಹಿಸ್ಕಾರ ಹಾಕುತಿದ್ದರೋ ಏನೋ ತಿಳಿಯದು !
ನನ್ನ ಮಟ್ಟಿಗೆ ಏನ್ .ಆರ್.ಏನ್ ಆಧುನಿಕ ತಂತ್ರ ಜ್ಞಾನದ ವಿಶ್ವವೇಶ್ವರಯ್ಯ ಅಂತ ಕರೆದರೆ ತಪ್ಪಾಗಲಾರದು .ಮಾಹಿತಿ ತಂತ್ರ ಜ್ಞಾನದ ಹರಿಕಾರನಾಗಿ ,ಲಕ್ಷ ಲಕ್ಷ ತಂತ್ರ ಜ್ನಾನಿಗಳೀಗೆ ಉದ್ಯೋಗವನ್ನು ನೀಡಿದವರು.ಜಾಗತಿಗಮಟ್ಟದಲ್ಲಿ ಕರ್ನಾಟಕದ ಹೆಸರನ್ನು ಪ್ರಸಿದ್ದಿಗೊಳಿಸಿದವರು.ತಮ್ಮ ಸ್ವಂತ ಯೋಗ್ಯತೆಯಿಂದ ಜಾಗತಿಗಮಟ್ಟದಲ್ಲಿ ಕೀರ್ತಿ ಗಳಿಸಿದ ಇನ್ಫೋಸಿಸ್ ಅನ್ನು ಹುಟ್ಟು ಹಾಕಿದವರು .ಇಂತವರು ನಮ್ಮವರು ಎಂದು ಹೇಳಲು ಹೆಮ್ಮೆ ಪಡಬೇಕು ,ಆದರೆ ನಮ್ಮಲ್ಲಿ ಕೆಲವು ಬುದ್ಧಿ ಜೀವಿಗಳು ಅನಿಸಿಕೊಂಡವರು ಇವರ ಕಾಲೆಳೆವುದರಲ್ಲಿ ಹೆಚ್ಚಿನ ಸಂತೋಷ ಪಡುವುದು ,ನಿಜಕ್ಕೂ ವಿಷಾದನೀಯ .
No comments:
Post a Comment