ಕುರುಡರು ತಾಯೇ ಕುರುಡರು
ಕಣ್ಣಿದ್ದು ಕಾಣದ ಕುರುಡರು
ಬಲ ಕಣ್ಣಿಗೆ ಸೋಂಕಿದೆ ಭಾಷಾಂಧತೆಯ ಪೊರೆ
ಎಡ ಕಣ್ಣ ಮುಚ್ಚಿದೆ ಧರ್ಮಾನ್ದತೆಯ ತೆರೆ
ಹುಟ್ಟು ಕುರುಡರಲ್ಲ ನಾವು ಧ್ರತರಾಸ್ತ್ರನಂತೆ
ಪಟ್ಟಿ ಕಟ್ಟಿ ಕೊಂಡಿಹೆವು ನಾವು ಗಾಂಧಾರಿಯಂತೆ
ಬ್ರಿಟಿಷರೋ ಯವನರೋ ನಮಗ್ಯಾರದರೇನು
ಅವರ ಸೇವಾನಿರತ ಭೀಷ್ಮರು ನಾವು
ಸ್ವಾಭಿಮಾನ ತ್ಯಜಿಸಿ ಅವಮಾನ ಸಹಿಸಿ
ಷಂಡರಂತೆ ಕುಳಿತ ಪಾಂಡವರು ನಾವು
ಗತಕಾಲದ ಭವಿತವ್ಯವ ಹಾಡಿ ಹೊಗಳಿ ಕೂಗಿ ಹೇಳಿ
ವರ್ತಮಾನವ ಮರೆತ ಉತ್ತರಕುಮಾರರು ನಾವು
ಇತಿಹಾಸದ ಕಹಿ ನೆನಪ ಹಿಕ್ಕೆ ಮರೆಲಾರದೆ ಹೆಕ್ಕಿ
ಸೊಕ್ಕಿನಲಿ ಕುಣಿಯುತಿಹ ಕೌರವರು ನಾವು.
ಬಾ ತಾಯೇ ಬಾ !ಕಡಿದು ನೀ ಪ್ರತಿಜ್ಞೆಯ ಸೆರೆ
ಹರಿಸಿ ನಿನ್ನ ದಿವ್ಯ ದೃಷ್ಟಿಯ ನಮ್ಮ ಪೊರೆ
ಭಶ್ಮವಾಗಲಿ ನಮ್ಮ ಹೃದಯಹೀನತೆಯ ಕುರುಡು
ಹರಡಲಿ ಎಲ್ಲೆಲ್ಲು ಸೌಹಾರ್ದತೆಯ ಸೊಗಡು.
--------------------
THis is a kannada poem I have written long back when there was lot of communual disturbance in our country.Translation is not perfect.However i will improve upon it.MORE KANNADA POEM TO FOLLOW
ReplyDeleteGRHATHWAR
Beautiful!!!
ReplyDeleteKURigalu saar kurigalu style???
ReplyDeleteWonderful...
Shanmugan