Wednesday, April 28, 2010

KURADARU NAVU KURUDARU

ಕುರುಡರು ತಾಯೇ ಕುರುಡರು
ಕಣ್ಣಿದ್ದು ಕಾಣದ ಕುರುಡರು

ಬಲ ಕಣ್ಣಿಗೆ ಸೋಂಕಿದೆ ಭಾಷಾಂಧತೆಯ ಪೊರೆ
ಎಡ ಕಣ್ಣ ಮುಚ್ಚಿದೆ ಧರ್ಮಾನ್ದತೆಯ ತೆರೆ
ಹುಟ್ಟು ಕುರುಡರಲ್ಲ ನಾವು ಧ್ರತರಾಸ್ತ್ರನಂತೆ
ಪಟ್ಟಿ ಕಟ್ಟಿ ಕೊಂಡಿಹೆವು ನಾವು ಗಾಂಧಾರಿಯಂತೆ

ಬ್ರಿಟಿಷರೋ ಯವನರೋ ನಮಗ್ಯಾರದರೇನು
ಅವರ ಸೇವಾನಿರತ ಭೀಷ್ಮರು ನಾವು
ಸ್ವಾಭಿಮಾನ ತ್ಯಜಿಸಿ ಅವಮಾನ ಸಹಿಸಿ
ಷಂಡರಂತೆ ಕುಳಿತ ಪಾಂಡವರು ನಾವು

ಗತಕಾಲದ ಭವಿತವ್ಯವ  ಹಾಡಿ ಹೊಗಳಿ ಕೂಗಿ ಹೇಳಿ
ವರ್ತಮಾನವ  ಮರೆತ ಉತ್ತರಕುಮಾರರು  ನಾವು
ಇತಿಹಾಸದ  ಕಹಿ ನೆನಪ ಹಿಕ್ಕೆ ಮರೆಲಾರದೆ ಹೆಕ್ಕಿ
ಸೊಕ್ಕಿನಲಿ   ಕುಣಿಯುತಿಹ ಕೌರವರು ನಾವು.

ಬಾ ತಾಯೇ ಬಾ !ಕಡಿದು ನೀ ಪ್ರತಿಜ್ಞೆಯ ಸೆರೆ
ಹರಿಸಿ ನಿನ್ನ ದಿವ್ಯ ದೃಷ್ಟಿಯ ನಮ್ಮ ಪೊರೆ
ಭಶ್ಮವಾಗಲಿ  ನಮ್ಮ ಹೃದಯಹೀನತೆಯ ಕುರುಡು
ಹರಡಲಿ ಎಲ್ಲೆಲ್ಲು ಸೌಹಾರ್ದತೆಯ  ಸೊಗಡು.
--------------------

3 comments:

  1. THis is a kannada poem I have written long back when there was lot of communual disturbance in our country.Translation is not perfect.However i will improve upon it.MORE KANNADA POEM TO FOLLOW

    GRHATHWAR

    ReplyDelete
  2. KURigalu saar kurigalu style???
    Wonderful...
    Shanmugan

    ReplyDelete